ಸಾಂಬರ್ ಪುಡಿ ಮಾಡುವ ವಿಧಾನ

೧೫ ೨೦ ಒಣ ಮೆಣಸಿನಕಾಯಿ

(ಬ್ಯಾಡಗಿ ಮತ್ತು ಗುಂಟೂರ್ ಮಿಶ್ರ ಮಾಡಿ)

೬ ಚಮಚ ಉದ್ದಿನಬೇಳೆ

೩ ಚಮಚ ತೊಗರಿ ಬೇಳೆ

೩ ಚಮಚ ಮಸೂರ್ ದಾಲ್ ಅಥವಾ ಕಡ್ಲೆಬೇಳೆ (ಬೇಕಾದಲ್ಲಿ)

೧೦

೧೨ ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ

೨ ಚಮಚ ಜೀರಿಗೆ

೧ ಚಮಚ ಮೆಂತೆ

೧ ಚಮಚ ಸಾಸಿವೆ (ಬೇಕಾದಲ್ಲಿ)

೧ ಚಮಚ ಕರಿಮೆಣಸು ಅಥವಾ ಕಾಳುಮೆಣಸು

(ಬೇಕಾದಲ್ಲಿ)

೧/೨ ಚಮಚ ಇಂಗು

೨ ಚಮಚ ಅಡುಗೆ ಎಣ್ಣೆ

ಸಾಂಬಾರ್ ಪೌಡರ್ ಮಾಡುವ ವಿಧಾನ:

ನಿಮಗೆ ಯಾವ ಶೈಲಿಯ ಸಾಂಬಾರ್ ಪೌಡರ್ ಅಥವಾ ಹುಳಿ ಪುಡಿ ಬೇಕೋ ಆ ಪಟ್ಟಿಗನುಸಾರವಾಗಿ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಈಗ ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಒಂದು

ಚಮಚ ಎಣ್ಣೆ ಹಾಕಿ, ಒಣ ಮೆಣಸಿನಕಾಯಿಯನ್ನು ಹುರಿಯಿರಿ.

ನಂತರ ಅದೇ ಬಾಣಲೆಗೆ ಬೇಳೆಗಳನ್ನು ಹಾಕಿ ಸ್ವಲ್ಪ ಕಂಡು ಬಣ್ಣ ಬರುವವರೆಗೆ ಹುರಿಯಿರಿ.

ನಂತರ ಅದೇ ಬಾಣಲೆಗೆ ಧನಿಯಾ, ಜೀರಿಗೆ, ಮೆಂತೆ, ಕಾಳುಮೆಣಸು ಮತ್ತು ಇಂಗು ಹಾಕಿ, ಸಣ್ಣ ಉರಿಯಲ್ಲಿ ಮಸಾಲೆಗಳ ಸುವಾಸನೆ ಬರುವವರೆಗೆ ಹುರಿಯಿರಿ. ಗಮನಿಸಿ, ದೊಡ್ಡ ಅಳತೆಯಾದಲ್ಲಿ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಬೇಕು.

ಹುರಿದ ಎಲ್ಲ ಮಸಾಲೆಗಳು ತಣ್ಣಗಾಗುವವರೆಗೆ ಕಾದು, ನೀರಿನ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.

ಘಮಘಮಿಸುವ ಸಾಂಬಾರ್ ಪೌಡರ್ ಅಥವಾ ಹುಳಿ ಪುಡಿ ತಯಾರಾಯಿತು. ಈಗ ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.