
ಕೋಲಾರ , ೧೭- : ನಗರದ ಗಾಂಧಿನಗರಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಭೇಟಿ ನೀಡಿ, ವಸತಿ ರಹಿತ ಕುಟುಂಬಗಳಿಂದ ಆಹವಾಲು ಸ್ವೀಕರಿಸಿದರು.
ಸುಮಾರು ೬೦೦ಕ್ಕೂ ಹೆಚ್ಚು ಕುಟುಂಬಗಳಲ್ಲಿ ಕೆಲವರಿಗೆ ನಿವೇಶನ ವಿದೆ, ಮನೆ ಇಲ್ಲ ಇನ್ನೂ ಕೆಲವರಿಗೆ ನಿವೇಶನವೂ ಇಲ್ಲ ಮನೆಯೂ ಇಲ್ಲ ಇಂತಿಷ್ಟು ಕುಟುಂಬಗಳು ಈಗಾಗಲೇ ವಸತಿ ಪ್ರದೇಶಕ್ಕೆ ಒಳಪಡುವ ಸರಕಾರ ಭೂಮಿಯಲ್ಲಿ ಅಕ್ರಮವಾಗಿ ಮನೆಗಳ ನಿರ್ಮಾಣ ಮಾಡಿದ್ದು, ಯಾರಿಗೂ ಹಕ್ಕು ಪತ್ರಗಳನ್ನೂ ನೀಡಿಲ್ಲ.
ಈ ಎಲ್ಲಾ ಕುಟುಂಬಗಳ ಆಹಾವಾಲುಗಳನ್ನು ಸ್ವೀಕರಿಸಿದ ಸಚಿವರು, ಸ್ಲಂಬೋರ್ಡ್ ಅಧಿಕಾರಿ ಗಳು ಮತ್ತು ನಗರ ಸಭೆ ಅಧಿಕಾರಿಗಳಿಗೆ ಈ ಸಂಬಂಧಪಟ್ಟ ದಾಖಲೆ ಗಳನ್ನು ಸಾರ್ವಜನಿಕ ಹಿತಸಕ್ತಿ ಅಡಿಯಲ್ಲಿ ಕಾನೂನೂ ರೀತಿಯ ಕ್ರಮಕ್ಕೆ ರವಾನೆ ಮಾಡಲು ಸೂಚಿಸಿದರು.
ಈ ಸಂಬಂಧ ಈಗಾಗಲೇ ಹಲವು ಬಾರಿ ಸಂಬಂಧ ಪಟ್ಟ ಇಲಾಖೆಗಳಿಗೆ ಮನವಿ ಮಾಡಿರುವ ಬಗ್ಗೆ ನಗರಸಭೆ ಸದಸ್ಯ ಪ್ರವೀಣ್ ಗೌಡ ಸಚಿವರ ಗಮನ ಕ್ಕೆ ತಂದರೂ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ರಾಜಕೀಯ ಕಾರ್ಯದರ್ಶಿ ನಜಿರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಹಾಗೂ ಎಂ ಎಲ್ ಸಿ ಅನಿಲ್ ಕುಮಾರ್ ಅವರಿಗೆ, ಸದರಿ ವಿಷಯ ವಾಗಿ ಸ್ಥಳೀಯರ ಆಹವಾಲು ಪಡೆದು ಅಧಿಕಾರಿಗೊಂದಿಗೆ ಸಮಾಲೋಚನೆ ಬಡ ವ ರಿಗೆ ಅನುಕೂಲ ಆಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸುರೇಶ್, ಸ್ಥಳೀಯ ಕಾಂಗ್ರೆಸ್ ಮುಖಂಡ ಸುಧಾಕರ್, ಅಯ್ಯ ಅನಿಲ್, ಮಂಜುಳಾ ನಾಗರಾಜ್, ಲಕ್ಷ್ಮಣ್ ಇದ್ದರು.