
ಕಲಬುರಗಿ,ಜ.27-ಮನೆ ಬೀಗ ಮುರಿದು 3.72 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಗಣೇಶ ನಗರದಲ್ಲಿ ನಡೆದಿದೆ.
ಮಂಜುಳಾ ಸುನೀಲಕುಮಾರ ಬಿಲಗುಂದಿ ಎಂಬುವವರ ಮನೆ ಬೀಗ ಮುರಿದು ಕಳ್ಳರು 64 ಸಾವಿರ ರೂ.ಮೌಲ್ಯದ 8 ಗ್ರಾಂ.ಬಂಗಾರದ ಪದಕವುಳ್ಳ ಲಾಕೆಟ್, 96 ಸಾವಿರ ರೂ.ಮೌಲ್ಯದ 12 ಗ್ರಾಂ.ಬಂಗಾರದ ಲಾಕೆಟ್, 21 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಕಿವಿಯೋಲೆ, 21 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಉಂಗುರ ಮತ್ತು 1.70 ಲಕ್ಷ ರೂ.ನಗದು ಸೇರಿ 3.72 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಇವರು ಮನೆಗೆ ಬೀಗ ಹಾಕಿಕೊಂಡು ಕಾರ್ಯಕ್ರಮದ ಪ್ರಯುಕ್ತ ದೇವನ ತೆಗನೂರ ಗ್ರಾಮಕ್ಕೆ ಹೋದ ವೇಳೆ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
























