
ಕಲಬುರಗಿ,ಆ.21-ಮನೆ ಬೀಗ ಮುರಿದು 1.48 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಕುಸನೂರದ ಸರಸ್ವತಿಪೂರ ಕಾಲೋನಿಯಲ್ಲಿ ನಡೆದಿದೆ.
ಸಂಗೀತಾ ರಾಜು ಪವಾರ ಎಂಬುವವರು ಬಾಡಿಗೆಗಿದ್ದ ಮನೆಯ ಬೀಗ ಮುರಿದು ಕಳ್ಳರು 80 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ಎರಡೆಳೆ ಸರ, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನೆಕ್ಲೆಸ್, 6 ಸಾವಿರ ರೂ.ಮೌಲ್ಯದ 20 ತೊಲೆಯ ಬೆಳ್ಳಿ ಕಾಲು ಚೈನ್ ಮತ್ತು 22 ಸಾವಿರ ರೂ.ನಗದು ಸೇರಿ 1.48 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.