ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ವಿಜಯಪುರ, ಸೆ. 12:ಜಿಲ್ಲೆಯ ಆಲಮೇಲ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 10,69,500 ರೂ. ಮೌಲ್ಯದ ಚಿನ್ನ ಬೆಳ್ಳಿ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ.
ದೇವರ ಹಿಪ್ಪರಗಿ ತಾಲೂಕಿನ ಚಿಕ್ರೂಕಿ ಗ್ರಾಮದ ಚಿಕ್ಕರೂಗಿ ಗ್ರಾಮದ ಶರಣಬಸು ಜಾಲವಾದ, ಪ್ರಕಾಶ ಕಂಬಾರ ಬಂಧಿತ ಆರೋಪಿಗಳು.
ಬಂಧಿತ ಆರೋಪಿತರಿಂದ 8,60,000 ಮೌಲ್ಯದ 86 ಗ್ರಾಂ. ಬಂಗಾರದ ಆಭರಣಗಳು,67,000 ಮೌಲ್ಯದ 67 ಗ್ರಾಂ ಬೆಳ್ಳಿ ಆಭರಣ ಹಾಗೂ ರೂ. 1,25,000 ಮೌಲ್ಯದ 5 ಮೋಟರ್ ಸೈಕಲ್‍ಗಳನ್ನು ಸೇರಿದಂತೆ ಒಟ್ಟು 10,52,000 ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ವಾಹನಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಆಲಮೇಲದ ಗಾಲೀಬ ಹಡಪದ ಎಂಬುವರು ಪೆÇಲೀಸ್ ಠಾಣೆಗೆ ಹಾಜರಾಗಿಗಿ ಯಾರೋ ಕಳ್ಳರು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಅಲ್ಲದೆ ರಾಜಕುಮಾರ ಕೊಣಶಿರಸಗಿ ಎಂಬುವರ ಮನೆಯಲ್ಲಿಯೂ ಕಳ್ಳತನ ನಡೆದಿತ್ತು. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡ ಪೆÇಲೀಸರು ವಿಶೇಷ ತನಿಖಾ ದಳ ರಚಿಸಿ ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.