
ಭಾಲ್ಕಿ,ಅ.18-ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಮರೆತು ಹೋಗಿದ್ದ 1.60 ಲಕ್ಷ ರೂಪಾಯಿಗಳನ್ನು ಅವರಿಗೆ ಮರಳಿ ತಲುಪಿಸುವುದರ ಮೂಲಕ ಬಸ್ ಚಾಲಕ ಮತ್ತು ನಿರ್ವಾಹಕ ಪ್ರಮಾಣಿಕತೆ ಮೆರೆದಿದ್ದಾರೆ.
ಭಾಲ್ಕಿ ಘಟಕದ ಬಸ್ ಚಾಲಕ ಹನೀಫ್ ಮತ್ತು ನಿರ್ವಾಹಕ ಸಿದ್ದರಾಮ ಶೆಟ್ಕರ್ ಅವರು ಪ್ರಯಾಣಿಕನಿಗೆ ಹಣ ಮರಳಿ ನೀಡುವುದರ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಭಾಲ್ಕಿಯಿಂದ ಬಾಡಸಾಂಗಿಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು 1.60 ಲಕ್ಷ ರೂಗಳಿದ್ದ ಹಣದ ಬ್ಯಾಗನ್ನು ಬಸ್ಸಿನಲ್ಲಿಯೇ ಇಟ್ಟು ಮರೆತು ಹೋಗಿದ್ದರು. ಬಸ್ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕನಿಗೆ ಹಣ ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದು ಇದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.