ಸೂರ್ಯಕಾಂತಿ ಬೀಜ, ಅಗಸೆದ ಬೀಜ, ಶಿಯಾಬೀಜಗಳು ಇವುಗಳಲ್ಲಿ ವಿಟಮಿನ್ ಇ ಅಧಿಕವಿದ್ದು ಪ್ರತಿದಿನ೧ ಸ್ಪೂನ್ ತಿನ್ನುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು
ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದ ತಟ್ಟೆಯಲ್ಲಿ ಹಸಿರು ಇರುವಂತೆ ನೋಡಿಕೊಳ್ಳಿ, ಅಂದರೆ ಸೊಪ್ಪು ಅಧಿಕ ತಿನ್ನಬೇಕು.
ಚೆನ್ನಾಗಿ ನೀರು ಕುಡಿಯಿರಿ
ಹೌದು, ಕೂದಲಿನ ಶೇ.೨೫ರಷ್ಟು ಜೀವಕೋಶಗಳು ನೀರಿನಿಂದ ನಿರ್ಮಿತವಾಗಿರುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೂದಲಿನ ಬೇರುಗಳು ಗಟ್ಟಿಯಾಗಿರಲು ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುವುದುಅತ್ಯಂತ ಅಗತ್ಯ. ದಿನವೊಂದರಲ್ಲಿ ಕನಿಷ್ಟ ೮ ಲೋಟಗಳಷ್ಟು ನೀರು ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದಲ್ಲ.
ಎಣ್ಣೆ ಮಸಾಜ್ ಮಾಡಿಕೊಳ್ಳಿ
ಹೆಚ್ಚಿನವರು ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುವುದನ್ನು ಮರೆತೇ ಬಿಡುತ್ತಾರೆ. ಅಷ್ಟೇ ಏಕೆ, ಅನೇಕರು ತಲೆಗೆ ಎಣ್ಣೆ ಹಾಕುವ ಅಭ್ಯಾಸವನ್ನೇ ಇಟ್ಟುಕೊಳ್ಳುವುದಿಲ್ಲ.ವಾರದಲ್ಲಿ ಕನಿಷ್ಠ ೨೦ನಿಮಿಷದಷ್ಟು ಕಾಲ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುವುದು ಮಾಡಿದರೆ ಕೂದಲಿಗೆ ಬೇಕಾದ ಆರೈಕೆ ಸಿಗುತ್ತದೆ.ಇದರಿಂದಾಗಿಕೂದಲು ಸೊಂಪಾಗಿ ಬೆಳೆಯುವುದು. ಕೂದಲಿನ ಬುಡ ಒಣಗಲು ಬಿಡಬೇಡಿ.
ಆರೋಗ್ಯಕರ ಕೂದಲಿಗಾಗಿ
ವ್ಯಾಯಾಮ ಮಾಡಿ
ಕಾಪಾಡಿಕೊಳ್ಳುವುದೂಕೂದಲಿನ ದೈಹಿಕ ಆರೋಗ್ಯ ರಕ್ಷಣೆಯ ಒಂದು ಮಾರ್ಗ ಎನ್ನಲಾಗುತ್ತದೆ. ಹಾಗೆಂದು ಗಂಟೆಗಟ್ಟಲೆ ಜಿಮ್ ನಲ್ಲಿ ಕಾಲ ಕಳೆಯುವುದು ಎಲ್ಲದಕ್ಕೂ ಪರಿಹಾರವಲ್ಲ.ದಿನನಿತ್ಯ ಕೊಂಚ ಕಾಲದೈಹಿಕವಾಗಿ ವ್ಯಾಯಾಮ ಮಾಡುವುದು, ಚಟುವಟಿಕೆಗಳಲ್ಲಿ ನಿರತವಾಗಿರುವುದು ದೇಹದ ಆರೋಗ್ಯಕ್ಕೆ ಹಾಗೂಕೂದಲಿನ ಬೆಳವಣಿಗೆಗೂ ಒಳ್ಳೆಯದು.
ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ.ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ತಲೆಗೆ ಶ್ಯಾಂಪೂ ಬಳಸಿ ಸ್ನಾನ
ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆಬಹುಬೇಗ ಕಡಿಮೆಯಾಗುತ್ತದೆ.
ಒಂದು ಚಮಚಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚಈರುಳ್ಳಿ ರಸ,ಒಂದುಚಮಚಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ.
ಈರುಳ್ಳಿಗೆ ಜೇನುತುಪ್ಪಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿ
ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ.
ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಎಣ್ಣೆ ಮಸಾಜ್ ಕೂಡಸಹಕಾರಿ.ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಅದು ಉಗುರು ಬೆಚ್ಚಗೆ ಇರುವಾಗ ಮೆಲ್ಲನೆ ಕೈಯಲ್ಲಿ ತೆಗೆದುಕೊಂಡು ತಲೆಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಿ, ಹೀಗೆ ಮಾಡುವುದರಿಂದ ರಕ್ತ ಸಂಚಾರ ಹೆಚ್ಚುವುದು, ನಂತರಒಂದುಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ನಂತರ ತಲೆಗೆ ಸುತ್ತಿ. ಹೀಗೆ ಮಾಡುವುದರಿಂದಕೂದಲಿನ ಬುಡಎಣ್ಣೆಯನ್ನು ಹೀರಿಕೊಂಡು ಬಲವಾಗುತ್ತದೆ ಹಾಗೂಕೂದಲು ಉದುರುವುದುಕಡಿಮೆಯಾಗಿ ಸೊಂಪಾಗಿ ಬೆಳೆಯುವುದು.
ವಿಟಮಿನ್ ಇ ಇರುವ ೨೦೦ಗ್ರಾಂ ಬೆಣ್ಣೆ ಹಣ್ಣು ತಿನ್ನುವುದರಿಂದ ಕೂದಲು ಆರೋಗ್ಯಕರವಾಗಿ ಬೆಳೆಯುವುದು.
ಬೀನ್ಸ್‌ನಲ್ಲಿ ಸತುವಿನಂಶವಿದ್ದು ೧೦೦ಗ್ರಾಂ ಬೀನ್ಸ್ ತಿಂದರೆ ನಿಮಗೆ ದಿನನಿತ್ಯ ಬೇಕಾಗುವ ಸತುವಿನಲ್ಲಿ ಶೇ. ೭ರಷ್ಟು ಲಭ್ಯವಾಗುತ್ತದೆ.
ಮೊಟ್ಟೆಯಲ್ಲಿ ಪ್ರೊಟೀನ್ ಹಾಗೂ ಬಯೋಟಿನ್ ಅಂಶವಿರುವುದರಿಂದಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಇನ್ನು ಇದರಲ್ಲಿರುವ ಬಯೋಟಿನ್ ಕೂದಲುದಪ್ಪವಾಗಿ ಬೆಳೆಯಲು ಸಹಕಾರಿ.
























