
ಚಡಚಣ:ಮಾ.13:ಹಿಂದುತ್ವ ಎನ್ನವದು ಒಂದು ಸನಾತನ ಆಚರಣೆ,ಇದು ಎಲ್ಲ ಜಾತಿ ಮತಗಳನ್ನು ಒಳಗೊಂಡ ಒಂದು ರಾಷ್ಟ್ರೀಯತೆಯ ಸಂಕೇತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತೀಯ ಕಾರ್ಯಕಾರಣಿ ಸದಸ್ಯ ರವೀಂದ್ರ ಜಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಲಾದ ಹಿಂದು ಸಮ್ಮೇಳನದಲ್ಲಿ ಅವರು ಮಾತನಾಡಿದರು.ಹಿಂದುತ್ವ ಎನ್ನುವದು ಭಾರತೀಯತೆ,ದೇಶ ಭಕ್ತಿ.ಇದು ಯಾವುದೇ ಜಾತ ಮತವಲ್ಲ.ದೇಶದಲ್ಲಿನ ಎಲ್ಲ ಮುಸ್ಲೀಮರು ಮೂಲತ: ಹಿಂದುಗಳೆ,ಅವರೆಲ್ಲ ಮತಾಂತರಗೊಂಡವರು.ಆರ್.ಎಸ್.ಎಸ್ ಕೆಲಸಮಾಡುವದು ಹಿಂದುತ್ವಕ್ಕಾಗಿ,ಹಿಂದು ರಾಷ್ಟ್ರ ನಿರ್ಮಾಣದ ಉದ್ದೇಶ ಹೊಂದಿದ ಈ ಸಂಘಟನೆ ಹಿಂದುಗಳನ್ನು ಒಗ್ಗಟ್ಟಿಸುವ ಕೆಲಸ ಮಾಡುತ್ತದೆ.ಆರ್.ಎಸ್.ಎಸ್ ಒಂದು ಅಲಿಖಿತ ಸಂಘಟನೆ.ಈ ಸಂಘಟನೆ ನೊಂದಾಯಿವಾಗಿಲ್ಲ,ಯಾಕೆಂದರೆ ಇಲ್ಲಿ ಯಾರೂ ನೊಂದಣಿದಾರರು,ಸದಸ್ಯರು ಇಲ್ಲ.ಜಾತಿ ಮತಗಳನ್ನು ಬಿಟ್ಟು ದೇಶದ ಪ್ರತಿ ಪ್ರಜೆ ನಾನು ಹಿಂದು,ನಾವು ಒಂದು ಆದಾರ ಆರ್.ಎಸ್.ಎಸ್ ನ ಅವಶ್ಯಕತೆ ಇರುವದಿಲ್ಲ.ಮೊದಲು ನಾವು ಹಿಂದುಗಳಾಬೇಕು.ಪಂಚ ಪರಿವರ್ತನೆಗಳಾದ ಸಮಾಜಿಕ ಸಾಮರಸ್ಯ,ಸನಾತನ ಸಂಸ್ಕಾರದ ಆಚರಣೆ,ಸ್ವದೇಶಿ ಬಳಕೆ,ಪರಿಸರ ರಕ್ಷಣೆ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆಯಾದಾಗ ಮಾತ್ರ ಹಿಂದು ಧರ್ಮದ ಏಳಿಗೆ ಸಾಧ್ಯ ಎಂದರು.
ಸನಿಧ್ಯ ವಹಿಸಿದ ಹುಕ್ಕೇರಿಯ ಅಭಿನವ ಮಂಜುನಾಥ ಸ್ವಾಮೀಜಿ,ಚಡಚಣ ವಿರಕ್ತ ಮಠದ ಷಡಕ್ಷರ ಸ್ವಾಮೀಜಿ,ಹಾವಿನಾಳದ ವಿಜಯ ಮಹಾಂತೇಶ ಸ್ವಾಮೀಜಿ,ಓಂ ಶಾಂತಿ ಕೇಂದ್ರದ ಸ್ರೀದೇವಿ ಅಕ್ಕನವರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿಂದು ಸಮ್ಮೇಳನ ಸಂಚಲನಾ ಸಮೀತಿ ಅಧ್ಯಕ್ಷ ಶಾಂತುಗೌಡ ಬಿರಾದಾರ,ರಾಜುಗೌಡ ಝಳಕಿ,ಚೇತನ ನಿರಾಳೆ ಮಾತನಾಡಿದರು.
ಸಮ್ಮೇಳನಕ್ಕೂ ಮೊದಲಯ ಪಟ್ಟಣದ ವಿದ್ಯಾನಗರದ ಹನುಮಾನ ಮಂದಿರದಿಂದ ಬೃಜತ್ ಶೋಭಾ ಯಾತ್ರೆ ಜರುಗಿತು.ಈ ಯಾತ್ರೆಯಲ್ಲಿ ಗೊಂಬೆ ಕುಣಿತ,ವಿವಿಧ ವಾದ್ಯ ಮೇಳಗಳು ಹಾಗೂ ಹಲವಾರು ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಮೆರವಣಿಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಚಿದಾನಂದ ಚಲುವಾದಿ,ಭೀಮಾ ಶಂಕರ ಬಿರಾದಾರ,ಸಂಜು ಐಹೊಳ್ಳಿ,ಕಾಂತುಗೌಡ ಪಾಟೀಲ,ರಾಮ ಅವಟಿ,ಚಂದು ನಿರಾಳೆ,ಪಟ್ಟಣ ಪಂಚಾಯ್ತಿ ಸದಸ್ಯರು,ಗ್ರಾಮಸ್ಥರು ಪಾಲ್ಗೊಂಡಿದ್ದರು.




























