ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಶ್ರೇಷ್ಠವಾದದ್ದು: ಶಂಕರ ಬಡಿಗೇರ

ಕೊಲ್ಹಾರ:ಜೂ.22: “ಬಡಮಕ್ಕಳ ಶಿಕ್ಷಣಕ್ಕೆ ನೀಡುವ ಸಹಾಯ ಪುಣ್ಯದ ಕೆಲಸ ಆ ದೇವರು ಸಹ ಇಂತಹ ಕಾರ್ಯಕ್ಕೆ ಅನುಗ್ರಹ ನೀಡುತ್ತಾನೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸಂಗಮೇಶ ಜಂಗಮಶೆಟ್ಟಿ ಮಾತನಾಡಿದರು.

ಕೊಲ್ಹಾರ ತಾಲ್ಲೂಕಿನಲ್ಲಿ ಶನಿವಾರ ಪಟ್ಟಣದ ಕೆ ಜಿ ಎಸ್ ಶಾಲೆ,ಪಿಎಂ ಶ್ರೀ ಎಂ ಪಿ ಎಸ್ ಶಾಲೆ ಹಾಗೂ ಚಿಕ್ಕ ಆಸಂಗಿ ಶಾಲೆ ಪ್ರತಿ ಶಾಲೆಯ 30 ಮಕ್ಕಳಿಗೆ ಓಂ ಸಾಯಿ ಮೊಬೈಲ್ ಕಮ್ಯಿನಿಕೆಷನ್ ಮತ್ತು ಬಜಾಜ್ ಪಿನ್ಸ್ ಸಹಯೋಗದಲ್ಲಿ ಉಚಿತವಾಗಿ ಸ್ಕೂಲ್ ಬ್ಯಾಗ್‍ಗಳನ್ನು ವಿತರಿಸಿದರು.

ಶಿಕ್ಷಣ ದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಬಡಮಕ್ಕಳಿಗೆ ಅನುಕೂಲ ಆಗಲಿ ಎಂದು ನಾವು ಸಮಾಜದ ಅಳಿಲು ಸೇವೆ ಮಾಡಿದ್ದು ಸಾರ್ಥಕ ಎಂದು ಓಂ ಸಾಯಿ ಮೊಬೈಲ್ ಕಮ್ಯಿನಿಕೆಷನ್ ಗ್ರೂಪ್ ಸದಸ್ಯ ಶಂಕರ ಬಡಿಗೇರ ಹೇಳಿದರು.
ಕಾರ್ಯಕ್ರಮದಲ್ಲಿ ಆನಂದ ಬಡಿಗೇರ,ಕೆ ಆರ್ ದಾಸರ, ಸಂತೋಷ ಹಿರೇಮಠ,ಪವನ್ ಹಡಪದ,ಮನೋಜ ಕುಂಟೋಜಿ, ಎಂ ಕೆ ಚೌಧರಿ,ಆಯ್ ಎಂ ಬಾಟಿ, ಎಲ್ಲಾ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.