Home ಮುಖಪುಟ ಸುದ್ದಿ ನೀರು ಪೋಲು ಮಾಡಿದ್ರೆ ಭಾರೀ ದಂಡ

ನೀರು ಪೋಲು ಮಾಡಿದ್ರೆ ಭಾರೀ ದಂಡ

ಬೆಂಗಳೂರು,ಮಾ.೨೨ –ನೀರು ಸರಬರಾಜು ಒಳಚರಂಡಿ ಮಂಡಳಿ ಈಗ ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ದುರುಪಯೋಗ ತಡೆಗಟ್ಟಲು ಜಲಮಂಡಳಿ ಹದ್ದಿನ ಕಣ್ಣಿಟ್ಟಿದೆ.


ಕುಡಿಯುವ ನೀರನ್ನು ಕುಡಿಯಲು ಮಾತ್ರ ಬಳಸಬೇಕು.
ಕಾರು/ಬೈಕ್ ತೊಳೆಯಲು ಬಳಸಬಾರದು.
ಗಿಡಗಳಿಗೆ ನೀರು ಹಾಕಲು .
ಮನೆ ಮುಂದೆ ಸ್ವಚ್ಛತೆಗೆ.
ಕಟ್ಟಡ ನಿರ್ಮಾಣಕ್ಕೂ ಕುಡಿಯುವ ನೀರಿನ ಬಳಕೆ ನಿಷೇಧಿಸಲಾಗಿದೆ.

ಒಂದು ವೇಳೆ ಕಾವೇರಿ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ದಂಡ ವಿಧಿಸಲು ಮುಂದಾಗಿದೆ.
ಎಷ್ಟು ದಂಡ.?
ಮೊದಲ ಬಾರಿ ತಪ್ಪು ಮಾಡಿದರೆ ೫೦೦೦ ದಂಡ
ಮರುಕಳಿಸಿದರೆ ೫೦೦೦ + ಹೆಚ್ಚುವರಿ ೫೦೦
ದಂಡ ಕಟ್ಟದಿದ್ದರೆ ನೀರಿನ ಬಿಲ್ಲಿನಲ್ಲೇ ಸೇರಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದರೆ. ಇನ್ನೂ
ಸರ್‌ಪ್ರೈಸ್ ವಿಸಿಟ್ ಮೂಲಕ ಅಧಿಕಾರಿಗಳ ತಪಾಸಣೆ
ಸ್ಥಳದಲ್ಲೇ ದಂಡದ ನೋಟಿಸ್ ನೀಡಿ
ನಿಯಮ ಉಲ್ಲಂಘನೆ ಮಾಡಿದರೆ ನೀರಿನ ಸಂಪರ್ಕ ಕಟ್ ಮಾಡುವ ಎಚ್ಚರಿಕೆ ನೀಡಿದರೆ.


ಕಾವೇರಿ ನೀರನ್ನು ಅನಗತ್ಯವಾಗಿ ಬಳಸಿದ್ರೆ ಕಠಿಣ ಕ್ರಮ. ವಾಹನ ತೊಳೆಯುವಂತಹ ಬಳಕೆಗಳಿಗೆ ಸಂಪೂರ್ಣ ನಿಷೇಧಿಸಲಾಗಿದ್ದು. ಕಾನೂನು ಆಧಾರ
೧೯೬೪ರ ಕಾಯ್ದೆಯ ಕಲಂ ೧೦೯ ಪ್ರಕಾರ ನೀರು ಪೋಲು ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.


ಕಾವೇರಿ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಃWSSಃ ಈ ಕ್ರಮ ಕೈಗೊಂಡಿದ್ದು, ನಾಗರಿಕರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರೆ..