ಆರೋಗ್ಯ ಅಧಿಕಾರಿಗಳ ಸಂಬಳ-ಭತ್ಯೆ ಬಾಕಿ; ಜ. ೨೯ರಂದು ಕಚೇರಿ ಮುಂದೆ ಧರಣಿ

ಯಾದಗಿರಿ:ಜ.೨೮: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಬಳ, ಪ್ರೋತ್ಸಾಹಧನ ಮತ್ತು ಇತರ ಭತ್ಯೆಗಳು ತಿಂಗಳುಗಳಿAದ ಬಾಕಿ ಇದ್ದು, ಆರ್ಥಿಕ ಸಂಕಷ್ಟಕ್ಕೆ ಆಹ್ವಾನ ನೀಡುತ್ತಿದೆ. ಈ ಕುರಿತು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ (ಎನ್‌ಎಚ್‌ಎಂ) ಗುತ್ತಿಗೆ ನೌಕರರ ಸಂಘದ ಯಾದಗಿರಿ ಘಟಕ ಜನವರಿ ೨೯ರಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿ ಹಮ್ಮಿಕೊಳ್ಳುತ್ತಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕ್ರಿಸ್ಟೋಫರ್ ಮಾತನಾಡಿ , “ನಮ್ಮನ್ನು ನಿಯಮಿತವಾಗಿ ಸಂಬಳ ಕೊಡದೆ, ನಿರಂತರ ವಿಳಂಬ ಮಾಡುತ್ತಿದ್ದು, ನಾವು ತೀವ್ರ ಆರ್ಥಿಕ ತೊಂದರೆ ಎದುರಿಸುತ್ತಿದ್ದೇವೆ. ತಾಯಿ-ಮಗು ಆರೈಕೆ, ಲಸಿಕೆ ಅಭಿಯಾನ, ಆರೋಗ್ಯ ಮೇಳ ಸೇರಿದಂತೆ ಹಲವು ಹಳ್ಳಿಗಳ ಸೇವೆ ನಾವು ನಿಷ್ಠೆಯಿಂದ ಮಾಡುತ್ತಿದ್ದರೂ, ಹಣಕ್ಕೆ ವಿಳಂಬ ಮಾಡಲಾಗುತ್ತಿದೆ, ಇದು ನಮ್ಮಗೆ ನೋವನ್ನುಂಟುಮಾಡುತ್ತಿದೆ” ಎಂದು ಹೇಳಿದರು.

ಸಂಘದ ಮುಖ್ಯ ಬೇಡಿಕೆಗಳು:

  • ವೇತನವನ್ನು ನಿಗದಿತ ದಿನಾಂಕಕ್ಕೆ ತಕ್ಷಣ ಪಾವತಿಸಬೇಕು.
  • ೨೦೨೪-೨೫ನೇ ಸಾಲಿನ ನಾಲ್ಕು ತಿಂಗಳ ಪೂರ್ಣ ಪ್ರೋತ್ಸಾಹಧನ ಮತ್ತು ತಿಂಗಳಿಗೆ ಕಡಿತ ಮಾಡಿರುವ ಮೊತ್ತವನ್ನು ಕೂಡ ಪಾವತಿಸಬೇಕು.
  • ೨೦೨೫ನೇ ಸಾಲಿನ ಬಾಕಿ ಪ್ರೋತ್ಸಾಹಧನ ತಕ್ಷಣ ಪಾವತಿಸಬೇಕು.
  • ಬಾಕಿ ಅರಿಯರ್ಸ್, ಬೋನಸ್, ಟಿಎ ಬಿಲ್ ಮತ್ತು ಇಂಟರ್ನೆಟ್ ಬಿಲ್ಲುಗಳನ್ನು ಕೂಡಲೇ ಪಾವತಿಸಬೇಕು.
  • ೧೬ ತಿಂಗಳುಗಳ ಬಾಕಿ ಇರುವ ಗ್ರೂಪ್-ಡಿ ಹಣ ಸಂಪೂರ್ಣವಾಗಿ ಪಾವತಿಸಬೇಕು.
  • ಆರೋಗ್ಯ ಮೇಳ ಮತ್ತು ಆಯುಷ್ಮಾನ್ ಕೇಂದ್ರಗಳ ಬಾಡಿಗೆ ಸಂಬAಧಿತ ಹಣವನ್ನು ಬಿಡುಗಡೆ ಮಾಡಬೇಕು.
  • ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಸಿಬ್ಬಂದಿಗೆ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.
    ಕ್ರಿಸ್ಟೋಫರ್ ಅವರು ಎಚ್ಚರಿಸಿದರು, “ಅಧಿಕಾರಿಗಳು ಸ್ಪಂದಿಸದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ಮುಂದುವರಲಿದೆ.ಎAದು ಇನ್ನೂ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದುಂಡಪ್ಪ ಚವಣ, ಕಾರ್ಯದರ್ಶಿ ಸಂದೀಪ್ ಕುಮಾರ್, ಮೌನೇಶ್ವರ, ಇಮ್ಯಾನ್ಯುಯೆಲ್ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಾದರು.