Home ಕ್ರೈಂ ಸುದ್ದಿಗಳು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ:ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ:ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಬಸವನಬಾಗೇವಾಡಿ,ಏ.22-ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಾಗೂರ ಹತ್ತಿರ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ಒಬ್ಬ ಬೈಕ್ ಸವಾರ ಬಸವನಬಾಗೇವಾಡಿಯಿಂದ ನಾಗೂರಿಗೆ, ಇನ್ನೊಬ್ಬ ಬೈಕ್ ಸವಾರ ನಾಗೂರದಿಂದ ಬಸವನಬಾಗೇವಾಡಿಗೆ ಹೊರಟಿದ್ದರು. ನಾಗೂರ ಹತ್ತಿರ ಎರಡೂ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ನಾಗೂರ ಗ್ರಾಮದ ಶಾಹಿದ್ ಹುಬ್ಬಳ್ಳಿ ಮತ್ತು ಸಂಗಯ್ಯ ಸಂಗನಬಸಯ್ಯ ಹಿರೇಮಠ (23) ಎಂದು ಗುರುತಿಸಲಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.