
ಬೇಕಾಗುವ ಸಾಮಗ್ರಿಗಳು
*ಅಂಜಾಲ್ ಫಿಶ್ – ೧/೨ ಕೆ.ಜಿ
*ಕಡ್ಲೆಹಿಟ್ಟು ೧ ಕಪ್
*ಕಸೂರಿ ಮೇಥಿ – ೩ ಚಮಚ
*ಹಸಿರು ಮೆಣಸಿನಕಾಯಿ -೫
*ಪುದೀನ ಸೊಪ್ಪು – ೧೦ ?
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ -೧ ಚಮಚ
*ಕಾಳು ಮೆಣಸಿನ ಪುಡಿ ೨ ಚಮಚ
*ಅಚ್ಚಖಾರದ ಪುಡಿ ೨ ಚಮಚ –
*ಧನಿಯಾ ಪುಡಿ ೨ ಚಮಚ –
*ಕರಿಬೇವು -೨೦ ಎಲೆ ತುಪ್ಪ ೩ -ಚಮಚ
*ನಿಂಬೆರಸ ೧ *ಲವಂಗ -೪-೫ * ೪-೫
*ಗಸಗಸೆ ೨ ಚಮಚ ಈರುಳ್ಳಿ -೨
*ಅರಿಶಿಣ ಪುಡಿ ೧ ಚಮಚ ಟೊಮೆಟೋ -೨
*ಎಣ್ಣೆ -೧೦೦ ೨. * -೪೦೦ ೨.
*ಉಪ್ಪು ರುಚಿಗೆ ತಕ್ಕಷ್ಟು –
ಮಾಡುವ ವಿಧಾನ: ಪಾತ್ರೆಗೆ ಎಣ್ಣೆ ಹಾಕಿ. ಕಾದ ಮೇಲೆ ಲವಂಗ,
ಚಕ್ಕೆ, ಗಸಗಸೆ, ದೊಡ್ಡದಾಗಿ ಹೆಚ್ಚಿದ ಈರುಳ್ಳಿ, ಅರಿಶಿಣ, ಕಡ್ಲೆ ಹಿಟ್ಟು, ಕಸೂರಿ ಮೇಥಿ ಹಾಕಿ ಚೆನ್ನಾಗಿ ಹುರಿಯಿರಿ. ತಣ್ಣಗಾದ ಮೇಲೆ ಇದಕ್ಕೆ ಹಸಿರು ಮೆಣಸಿನಕಾಯಿ, ಪುದೀನಾ ಸೊಪ್ಪು, ಸೇರಿಸಿ ರುಬ್ಬಿಡಿ. ಪಾತ್ರೆಗೆ ಎಣ್ಣೆ ಹಾಕಿ. ಕಾದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಿ. ನಂತರ ಈರುಳ್ಳಿ, ಟೊಮೆಟೋ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಕರಿಬೇವು, ರುಬ್ಬಿಕೊಂಡ ಮಸಾಲೆ, ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ. ಕತ್ತರಿಸಿಟ್ಟುಕೊಂಡ ಮೀನಿನ ಪೀಸುಗಳು, ಸ್ವಲ್ಪ ತುಪ್ಪ ಮತ್ತು ನಿಂಬೆರಸ ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿ. ಈಗ ಘಮ ಘಮಿಸುವ ಹರಿಯಾಲಿ ಫಿಶ್ ಕರಿ ರೆಡಿ.