
ಅಹಮದಾಬಾದ್, ಅ.೧೭- ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇಂದು ಮಂತ್ರಿಮಂಡಲವನ್ನು ವಿಸ್ತರಿಸಿದ್ದಾರೆ. ಗೃಹ ಸಚಿವ ಹರ್ಷ ರಮೇಶ್‌ಭಾಯ್ ಸಂಘವಿ ಉಪಮುಖ್ಯಮಂತ್ರಿಯಾಗಿ ಹಾಗೂ ೨೫ ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
೧೯ ಮಂದಿ ಹೊಸಬರಿಗೆ ಮಂತ್ರಿ ಭಾಗ್ಯ ಲಭಿಸಿದೆ. ನಿನ್ನೆಯಷ್ಟೇ ೧೬ ಮಂದಿ ಸಚಿವರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇದರ ಜೊತೆಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಡೇಜಾ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ
ಗಾಂಧಿನಗರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ನೂತನ ಶಾಸಕರಿಗೆ ಪ್ರಮಾಣ ವವನ ಬೋಧಿಸಿದರು.ಈ ವೇಳೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು
ಸಂಘವಿ, ರಿವಾಬ ಅಲ್ಲದೆ ಬಿಜೆಪಿಯ ಸ್ವರೂಪ್‌ಜಿ ಠಾಕೂರ್, ಪ್ರವೆಣ್‌ಕುಮಾರ್ ಮಾಲಿ, ಋಷಿಕೇಶ್ ಪಟೇಲ್, ದರ್ಶನ ವಘೇಲಾ, ಕುನ್ವರ್ಜಿ ಬವಲಿಯಾ, ಅರ್ಜುನ್ ಮೊದ್ವಾಡಿಯಾ, ಪರ್ಷೋತ್ತಮ್ ಸೋಲಂಕಿ, ಜಿತೇಂದ್ರ ವಘಾನಿ, ಪ್ರಫುಲ್ ಪನ್ಶೆರಿಯಾ ಮತ್ತು ಕನುಭಾಯಿ ದೇಸಾಯಿ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
ಗುಜರಾತ್‌ನ ೬ನೇ ಉಪ ಮುಖ್ಯಮಂತ್ರಿಯಾಗಿ ಸಾಂಘ್ವಿ
ಹರ್ಷ ಸಾಂಘ್ವಿ ಗುಜರಾತ್‌ನ ಉಪ ಮುಖ್ಯಮಂತ್ರಿಯಾದ ಆರನೇ ವ್ಯಕ್ತಿಯಾಗಿದ್ದಾರೆ. ಗುಜರಾತ್‌ನ ಮೊದಲ ಉಪ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಚಿಮನ್‌ಭಾಯ್ ಪಟೇಲ್, ಅವರು ಮಾರ್ಚ್ ೧೯೭೨ ರಿಂದ ಜುಲೈ ೧೯೭೩ ರವರೆಗೆ ಸೇವೆ ಸಲ್ಲಿಸಿದ್ದರು.
ಈ ಮುಂಚೆ ಕಾಂಗ್ರೆಸ್‌ನ ಕಾಂತಿಲಾಲ್ ಘಿಯಾ ಅವರು ಅಂದಿನ ಮುಖ್ಯಮಂತ್ರಿ ಘನಶ್ಯಾಮ್ ಓಜಾ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿ ಬಳಿಕ ಗುಜರಾತ್‌ನ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಮೂರನೇ ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಕೇಶುಭಾಯಿ ಪಟೇಲ್, ಅವರು ಮಾರ್ಚ್ ೧೯೯೦ ರಿಂದ ಅಕ್ಟೋಬರ್ ೧೯೯೦ ರವರೆಗೆ ಆಗಿನ ಮುಖ್ಯಮಂತ್ರಿ ಚಿಮನ್ಭಾಯಿ ಪಟೇಲ್ ಅವರ ಸರ್ಕಾರದಲ್ಲಿ ಕೆಲಸ ಮಾಡಿದ್ದರು
ಚಿಮನ್ಬಾಯಿಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗುವವರೆಗೂ ಏರಿದರು ಮತ್ತು ಮಾರ್ಚ್ ೧೯೯೫ ರಿಂದ ಅಕ್ಟೋಬರ್ ೧೯೯೫ ರವರೆಗೆ ಮತ್ತು ನಂತರ ಮಾರ್ಚ್ ೧೯೯೮ ರಿಂದ ಅಕ್ಟೋಬರ್ ೨೦೦೧ ರವರೆಗೆ ಕಚೇರಿಯಲ್ಲಿ ಸೇವೆ ಸಲ್ಲಿಸಿದರು.