
ಕಲಬುರಗಿ,ಅ.28: ಚನ್ನೈನಲ್ಲಿ ಅ.29 ರಿಂದ ನ.2 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಪಂದ್ಯಾಟದಲ್ಲಿ ಗುಲಬರ್ಗ ವಿಶ್ವವಿದ್ಯಾಲಯವು ಭಾಗವಹಿಸುತ್ತಿದೆ.
ತಂಡದ ನಾಯಕಿ ರಾಜೇಶ್ವರಿ ಮತ್ತು 13 ಜನ ತಂಡದ ಸದಸ್ಯರು ಭಾಗವಹಿಸುವರು.ತಂಡದ ವ್ಯವಸ್ಥಾಪಕ ತರಬೇತುದಾರರಾಗಿ ದೈಹಿಕ ಶಿಕ್ಷಣ ವಿಭಾಗದ ಶ್ರೀಶೈಲ ಮತ್ತು ವೀರೇಶ ಭಾಗವಹಿಸುವರು.
ತಂಡದ ಯಶಸ್ಸಿಗೆ ಕುಲಪತಿ ಪ್ರೊ ಶಶಿಕಾಂತ ಉಡಿಕೇರಿ,ಕುಲಸಚಿವರಾದ ಪ್ರೊ ರಮೇಶ ಲಂಡನಕರ್,ಡಾ. ಎನ್.ಜಿ ಕಣ್ಣೂರ, ಡಾ. ಎಚ್.ಎಸ್ ಜಂಗೆ,ಡಾ.ಚಂದ್ರಕಾಂತ ಬಿರಾದಾರ ,ಪ್ರಶಾಂತಕುಮಾರ ಡಿ,ಅರುಣಕುಮಾರ ಎಚ್ ಅವರು ತಂಡಕ್ಕೆ ಶುಭ ಹಾರೈಸಿದರು.






























