
ಬೀದರ, ಮಾ.23: ಸಮಗ್ರ ಕೃಷಿ ಜೊತೆಗೆ ತೋಟಗಾರಿಕೆ, ತರಕಾರಿ ಹಾಗೂ ಪುಷ್ಪೋದ್ಯಮ ಬೆಳೆಗಳನ್ನು ಬೆಳೆದು ರೈತರು ವಿದೇಶಗಳಿಗೆ ರಫ್ತು ಮಾಡುವ ಮುಖಾಂತರ ಅಧಿಕ ಲಾಭವನ್ನು ಪಡೆಯಬೇಕೆಂದು ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಅವರು ರವಿವಾರ ಬೀದರನ ಚಟ್ನಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ವತಿಯಿಂದ 84 ದಿನಗಳ ಕಾಲ ಹಮ್ಮಿಕೊಂಡ್ಡಿರುವ ತೋಟಗಾರಿಕೆ ಗ್ರಾಮೀಣ ತೋಟಗಾರಿಕೆ ಕಾರ್ಯನುಭವ ಶಿಬಿರದ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ವಲಯವು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಸಮಗ್ರ ಕೃಷಿ ಜೊತೆಗೆ ತರಕಾರಿ ಹಾಗೂ ಪುಷ್ಪೋದ್ಯಮ ಬೆಳೆಗಳನ್ನು ಬೆಳೆದು ರೈತರು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಅಧಿಕ ಲಾಭವನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ಜೊತಜೊತೆಗೆ ಬೆಳೆದಿರುವ ಬೆಳೆಯನ್ನು ಹತ್ತಿರದ ಸೂಪರ್ ಮಾರ್ಕೆಟ್, ಡಿಜಿಟಲ್ ಮಾರ್ಟ ಕಡೆಗಳಲ್ಲಿ ಮಾರಟ ಮಾಡುವುದರಿಂದ ಉತ್ತಮ ಆದಾಯ ದೊರೆಯುತ್ತದೆ ಎಂದು ತಿಳಿಸಿದರು.
ರೈತರು ಮಾರುಕಟ್ಟೆ ಅನುಗುಣವಾಗಿ ತಮ್ಮ ಬೆಳೆಗಳನ್ನು ಶೀತಘಟಕಗಳಲ್ಲಿ ಸಂಗ್ರಹಿಸಿ ಇಟ್ಟು ಉತ್ತಮ ಆದಾಯ ವಪಡೆಯಬಹುದೆಂದು ತಿಳಿಸಿದರು. ಕೃಷಿಯಲ್ಲಿ ಕೃತಕಬುದ್ದಿಮತ್ತೆ ಉಪಯೋಗಿಸಿ ತಮ್ಮ ತಾಕುಗಳನ್ನು ಅಭಿವೃದ್ದಿಪಡಿಸಬಹುದೆಂದು ತಿಳಿಸಿದರು. ಚಟ್ನಳ್ಳಿ ಗ್ರಾಮದಲ್ಲಿ ಆನೇಕ ರೈತರು ಪ್ರಗತಿಪರ ರೈತರಾಗಿ ಹೊರಹುಮ್ಮಬೇಕೆಂದು ತಿಳಿಸಿದರು. ರೈತರು ಹಾಗೂ ವಿಧ್ಯಾರ್ಥಿಗಳು ಪರಸ್ಪರ ಸಂವಹನ ನಡೆಸುವುದರಿಂದ ಪ್ರಾಯೋಗಿಕ ಜ್ಞಾನ ದೊರಕುತ್ತದೆ ಎಂದರು.
ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ. ವಿ. ಪಾಟೀಲ್ ಮಾತನಾಡಿ, ರೈತರು ಸಮಗ್ರ ಕೃಷಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಕೋಳಾರ್ (ಕೆ) ನಲ್ಲಿರುವ ತೋಟಗಾರಿಕೆ ಫಾರ್ಮನಲ್ಲಿ ವಿವಿಧ ತಳಿಗಳ ಬಹುವಾರ್ಷಿಕ ಹಣ್ಣು ಬೆಳೆಗಳನ್ನು ಬೆಳೆಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸದಲ್ಲಿ ವಿಧ್ಯಾರ್ಥಿಗಳಿಗೆ ಕಲಿಕೆ ಹಾಗೂ ರೈತರಿಗೆ ಪ್ರಾಯೋಗಿಕವಾಗಿ ಉಪಯೋಗವಾಗುತ್ತದೆ. ರೈತರು ಕಾಲಕ್ಕನುಗುಣವಾಗಿ ಬೆಳೆಗಳಲ್ಲಿ ಮಾರ್ಪಡು ಹೊಂದಿದಾಗ ಮಾತ್ರ ಉತ್ತಮ ಅಭಿವೃದ್ಧಿ ಸಾದ್ಯ. ರೈತರು ತಪ್ಪದೆ ತಮ್ಮ ತಾಕುಗಳ ಮಣ್ಣು ಪರೀಕ್ಷೆ ಮಾಡಿಸಿ, ಅದಕ್ಕೆ ಅನುಗುಣವಾಗಿ ಬೆಳೆಗಳ ಸೂಕ್ತ ತಳಿಗಳನ್ನು ಬೆಳೆಯುವುದರಿಂದ ಅಧಿಕ ಇಳುವರಿ ಪಡೆಯಬಹುದೆಂದು ಹೇಳಿದರು.
ತೋಟಗಾರಿಕಾ ಮಹಾವಿದ್ಯಾಲಯz ವತಿಯಿಂದ ರೈತರಿಗೆ ನೆರವಾಗಲು ಚಟ್ನಳ್ಳಿ ಗ್ರಾಮದಲ್ಲಿ ರೈತ ಸಹಾಯ ಕೇಂದ್ರವನ್ನು ಉದ್ಗಾಟನೆಗೊಳಿಸಲಾಯಿತು. ಶಾಲೆಯ ಸುತ್ತಮುತ್ತ ಗಿದ್ಳನ್ನು ನೆಡಲಾಯಿತು. ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲಾಯಿತು.
ಈ ಸಂದರ್ಭದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಜಾನ್ಹವಿ, ತೋಟಗಾರಿಕೆ ಕಾಲೇಜಿನ ವತಿಯಿಂದ ಸಂಯೋಜಕರಾದ ಡಾ. ಹರೀಶ, ಡಾ. ಫಾರೂಕ್, ಡಾ. ವಿಜಯ ಮಹಾಂತೇಶ್, ಡಾ. ವಿ.ಪಿ. ಸಿಂಗ್, ಅಂಜನೇಯ, ಡಾ. ಅನುರಾಧ ಸೇರಿದಂತೆ ಚಟ್ನಳ್ಳಿ ಗ್ರಾಮದ ಮಹಾದೇವಿ ಮಲ್ಲಪ್ಪ, ವಿಜಯಕುಮಾರ್ ಸ್ವಾಮಿ, ಘಾಳೆಪ್ಪ ಚಟ್ನಳ್ಳಿ, ರಾಜರೆಡ್ಡಿ ಒಂಕಾರ್ ಕೆ. ಹಾಗೂ ಪ್ರಗತಿಪರ ರೈತರಾದ ಶಂಕ್ರರಪ್ಪ ಬಿರಾದರ್ ಮುಂತಾದವರು ಪಾಲ್ಗೊಂಡಿದ್ದರು. ಅಂತಿಮ ವರ್ಷದ ವಿದ್ಯಾರ್ಥಿನಿಯಾದ ಅಂಬಿಕ ಕಾರ್ಯಕ್ರಮದ ನಿರೂಪಣೆ ಹಾಗೂ ಚಿತ್ರಾ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.




























