
ನವಲಗುಂದ.ಅ.೧೮: ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಗುಂಪು ಜನಪದ ಮತ್ತು ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ನವೆಂಬರ್ ೮ ರಂದು ಶನಿವಾರ ಬೆಳಗ್ಗೆ ೧೦ ಗಂಟೆಗೆ ಕಬ್ಬನ್ ಉದ್ಯಾನವನದಲ್ಲಿರುವ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಡಿ. ರಂಗಣ್ಣವರವರು ತಿಳಿಸಿದ್ದಾರೆ.
ಈ ಸ್ಪರ್ಧೆ ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗಾಗಿ ಆಯೋಜಿಸಲಾಗಿದೆ. ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನಿಂದ ಭಾಗವಹಿಸಲು ಇಚ್ಚಿಸುವವರು ನವೆಂಬರ್ ೨ ರ ಸಂಜೆ ೫ ಗಂಟೆಯೊಳಗೆ ಆನ್ಲೆöÊನ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಎಂಟರಿAದ ಹನ್ನೆರಡು ಮಂದಿಯವರಾಗಿರಬೇಕು. ನೃತ್ಯ ವಿಷಯಗಳು ಕನ್ನಡ ನಾಡು, ನುಡಿ, ಸಂಸ್ಕöÈತಿ, ಪರಂಪರೆ ಹಾಗೂ ನಾಡಿನ ವೈಭವವನ್ನು ಪ್ರತಿಬಿಂಬಿಸುವAತಿರಬೇಕು. ಸ್ಪರ್ಧೆಯ ತೀರ್ಪುಗಾರರ ನಿರ್ಧಾರ ಅಂತಿಮವಾಗಿದ್ದು, ಭಾಗವಹಿಸುವವರು ಸ್ಪರ್ಧೆಯ ದಿನ ಬೆಳಗ್ಗೆ ೯ ಗಂಟೆಗೆ ಸ್ಥಳದಲ್ಲಿ ಹಾಜರಾಗಬೇಕು.
ಆನ್ಲೆöÊನ್ ನೋಂದಣಿಗೆ ಈ ಲಿಂಕ್ ಬಳಕೆ ಮಾಡಬಹುದು: hಣಣಠಿs://ಜಿoಡಿms.gಟe/೮ಠಿಖ೩m೫ಟಿಘಿoತಿತಿಕಿzಛಿಛಿs೯
ಕನ್ನಡ ನಾಡು ಮತ್ತು ನುಡಿಯ ಗೌರವ ಕಾಪಾಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೌಕರರು ಸಕ್ರಿಯವಾಗಿ ಭಾಗವಹಿಸಬೇಕೆಂದು ತಾಲ್ಲೂಕು ಅಧ್ಯಕ್ಷ ವ್ಹಿ.ಡಿ. ರಂಗಣ್ಣವರು ಅಭಿಪ್ರಾಯಪಟ್ಟಿದ್ದಾರೆ.