
ಬೇಕಾಗುವ ಸಾಮಗ್ರಿಗಳು
*ಮಟನ್ – ೧/೨ಕೆ.ಜಿ, *ಟೊಮೆಟೋ ೩
*ಈರುಳ್ಳಿ – ೧, ಶುಂಠಿ -ಸ್ವಲ್ಪ
*ಬೆಳ್ಳುಳ್ಳಿ -೧, ಕೊತ್ತಂಬರಿ ಸೊಪ್ಪು – ಸ್ವಲ್ಪ
*ಪುದೀನ – ಸ್ವಲ್ಪ, *ಮೆಂತ್ಯ ಸೊಪ್ಪು – ಸ್ವಲ್ಪ
*ಉಪ್ಪು ರುಚಿಗೆ ತಕ್ಕಷ್ಟು
*ಗರಂ ಮಸಾಲ ೧ ಚಮಚ –
*ಹಸಿರು ಮೆಣಸಿನಕಾಯಿ ೪
೧/೨ ಚಮಚ, *ಚಕ್ಕೆ ೪
*ಲವಂಗ ೮, * ೩
*ಅನಾನಸ್ ಹೂ ೨, ಸೋಂಪು ೧ ಚಮಚ –
ಮಾಡುವ ವಿಧಾನ :
ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ರುಬ್ಬಿಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ, ಕಾದ ನಂತರ ಅನಾನಸ್ ಹೂ, ಏಲಕ್ಕಿ, ಲವಂಗ, ಚಕ್ಕೆ, ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಹುರಿದು ಕೊಳ್ಳಿ. ಇದಕ್ಕೆ ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು, ಹಾಕಿ ಚೆನ್ನಾಗಿ ಬೆರೆಸಿ. ನಂತರ ರುಬ್ಬಿಕೊಂಡ ಮಸಾಲ, ಮಟನ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗರಂ ಮಸಾಲ, ಅರಿಶಿಣ ಪುಡಿ, ಟೊಮೆಟೊ ಪೇಸ್ಟ್ ಹಾಗೂ ಅಕ್ಕಿ ಹಾಕಿ ೨ ವಿಷಲ್ ಕೂಗಿಸಿದರೆ ಗೌಡರ ಸ್ಟೈಲ್ ಮಟನ್ ಬಿರಿಯಾನಿ ರೆಡಿ.