Home ಜಿಲ್ಲೆ ಬೆಂಗಳೂರು ಡಾ.ತೃಪ್ತಿ ಎನ್ ಎಸ್‌ಗೆ ಚಿನ್ನದ ಪದಕ ಗುಣಮಟ್ಟದ ಚಿಕಿತ್ಸೆ ನೀಡುವ ಬಯಕೆ

ಡಾ.ತೃಪ್ತಿ ಎನ್ ಎಸ್‌ಗೆ ಚಿನ್ನದ ಪದಕ ಗುಣಮಟ್ಟದ ಚಿಕಿತ್ಸೆ ನೀಡುವ ಬಯಕೆ

ಕೋಲಾರ,ಮಾ.೭-ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಕಟಿಸಿದ ಎಂ.ಡಿ (ಎರ್ಮೆಜೆನ್ಸಿ ಮೆಡಿಸಿನ್) ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜಿನ ಡಾ. ತೃಪ್ತಿ ಎನ್ ಎಸ್ ಅವರಿಗೆ ಚಿನ್ನದ ಪದಕ ಲಭಿಸಿದೆ.


ಡಾ. ತೃಪ್ತಿ ಎನ್ ಎಸ್ ಅವರು ಕೋಲಾರ ನಗರದ ಎಸ್.ಜಿ. ಲೇಔಟ್ ನಿವಾಸಿಗಳಾದ ಮೇಡತಂಬಿಹಳ್ಳಿಯ ಎನ್.ಶ್ರೀನಿವಾಸರೆಡ್ಡಿ ಮತ್ತು ಸುನೀತಾ ದಂಪತಿಯ ಪುತ್ರಿಯಾಗಿರುವರು.


ಎನ್. ಶ್ರೀನಿವಾಸರೆಡ್ಡಿ ಅವರು ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅಧೀಕ್ಷಕರಾಗಿ ಕೋಲಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ.


ಡಾ.ತೃಪ್ತಿ ಅವರ ಈ ಸಾಧನೆಗೆ ಕುಟುಂಬದವರು, ಬಂಧುಗಳು, ಸ್ನೇಹಿತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಹಾಗೂ ಸಮಾಜಕ್ಕೆ ಸೇವೆ ಮಾಡಬೇಕು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಡಾ. ತೃಪ್ತಿ ಎನ್ ಎಸ್ ತಿಳಿಸಿದ್ದಾರೆ.