
ಗುಳೇದಗುಡ್ಡ,ಫೆ.೮: ಇಂದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದೇ ಕಡಿಮೆಯಾಗಿದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ನಮ್ಮ ಮಕ್ಕಳ ಸಂಸ್ಕಾರಯುವಾಗಿ ಬೆಳೆಯುತ್ತಾರೆ. ಸಂಸ್ಕಾರ ಭಾರತಿ ಮಕ್ಕಳಲ್ಲಿ ಅಡಗಿರುವ ಕಲಾಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ದೇವಾಂಗ ಸಮಾಜದ ದತ್ತಿ ಅಧ್ಯಕ್ಷ ಅಮಾತೆಪ್ಪ ಕೊಪ್ಪಳ ಹೇಳಿದರು.
ಅವರು ಪಟ್ಟಣದ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಂಗ ಸಮಾಜ ದತ್ತಿ, ಸಂಸ್ಕಾರ ಭಾರತಿ ಹಾಗೂ ಜ್ಞಾನಸಿಂಧು ಕಲಾತಂಡದ ವತಿಯಿಂದ ಹಮ್ಮಿಕೊಂಡ ಭರತಮುನಿ ಸ್ಮೃತಿ ದಿನಾಚರಣೆ ಅಂಗವಾಗಿ ಭರತನಾಟ್ಯ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇ.ಮೂ. ವಿವೇಕಾನಂದಸ್ವಾಮಿ ದೇವಾಂಗಮಠ ಉಪನ್ಯಾಸ ನೀಡಿ, ೬೪ ವಿದ್ಯೆಗಳಲ್ಲಿ ನಾಟ್ಯಕಲೆಯೂ ಒಂದು. ಭರತಮುನಿ ರಚಿಸಿದ ನಾಟ್ಯಶಾಸ್ತç ಗ್ರಂಥ ಭಾರತೀಯ ಕಲೆ, ಕಾವ್ಯಶಾಸ್ತçದ ಅಡಿಪಾಯವಾಗಿದೆ. ಇಂತಹ ಪ್ರಾಚೀನ ಇತಿಹಾಸವಿರುವ ನಮಗೆ ಸಂಗೀತ, ಕಲೆ ಇಲ್ಲದೇ ಇರುವ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಗುರುತಿಸದೇ ಇರುವ ಕಲಾವಿದರನ್ನು ಗುರುತಿಸಿ, ಕಲೆಯನ್ನು ಸಮಾಜಮುಖಿಯನ್ನಾಗಿಸುವ ಕೆಲಸವನ್ನು ಸಂಸ್ಕಾರ ಭಾರತಿ ಮಾಡುತ್ತಿದೆ ಎಂದರು.
ಅಷ್ಟೆ ಅಲ್ಲದೇ ಸಮಾಜವನ್ನು ತಿದ್ದಬೇಕು, ಸಮಾಜಕ್ಕೊಂದು ಸಂಸ್ಕಾರ ನೀಡಬೇಕು ಆ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣಗಬೇಕು ಇದರಿಂದ ಇಡೀ ದೇಶ ಸಂಸ್ಕಾರಯುತ ದೇಶವಾಗಬೇಕು ಎಂಬ ಉದ್ದೇಶದಿಂದ ಸಂಸ್ಕಾರ ಭಾರತಿ ಕಾರ್ಯನಿರ್ವಹಿಸುತ್ತಿದೆ. ಕಲೆ ನಮಗೆ ವಿಲಾಸಿಯಾಗಬಾರದು, ಅದು ನಮಗೆ ಆತ್ಮಸಾಕ್ಷಾತ್ಕಾರ ಕಲ್ಪಿಸಬೇಕು, ಕಲೆಯಿಂದ ಜೀವನ ವಿಕಾಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪ್ರವಚನಕಾರ ಈರಣ್ಣ ಅಲದಿಶಾಸ್ತಿçÃಗಳು, ಹರ್ಮೋನಿಯಂ ಕಲಾವಿದ ಈರಣ್ಣ ತಾಂಡೂರ, ರಂಗೋಲಿಕಲಾವಿದೆ ಕಮಲಾ ದಹಿಂಡೆ ಅವರನ್ನು ಸಂಸ್ಕಾರಭಾರತಿಯಿAದ ಸನ್ಮಾನಿಸಲಾಯಿತು.
ಸಂಸ್ಕಾರ ಭಾರತಿ ನಗರ ಅಧ್ಯಕ್ಷ ರಾಚಣ್ಣ ಕೆರೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪುಂಡಲೀಕ ಬಡಿಗೇರ, ಜಿಲ್ಲಾ ಕಾರ್ಯದರ್ಶಿಗಳಾದ ಶಂಕ್ರಪ್ಪ ರೂಡಗಿ, ಶಂಕರ ಮುಂದಿನಮನಿ, ಕಾರ್ಯದರ್ಶಿ ಮಲ್ಲಿಕಾರ್ಜುನ ರಾಜನಾಳ, ಸಹಕಾರ್ಯದರ್ಶಿ ಸುರೇಶ ವಗ್ಗಾ, ಖಜಾಂಚಿ ಸುಧೀರ ಗುಡ್ಡದ, ಸದಸ್ಯರಾದ ಮಹಾದೇವ ಜಗತಾಪ, ಸಂಗಮೇಶ ಚಿಕ್ಕಾಡಿ, ಕುಮಾರ ರಾಠೋಡ, ಹನಮಂತ ರೂಢಗಿ, ವಿಜಯಲಕ್ಷಿö್ಮÃ ಕಟ್ಟಿ, ಶಶಿಕಲಾ ಭಾವಿ, ಗೀತಾ ಸಾರಂಗಮಠ ಮತ್ತಿತರರು ಇದ್ದರು. ಬಳಿಕ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಹಾಗೂ ಜ್ಞಾನಸಿಂಧು ಕಲಾತಂಡದಿAದ ಸಂಗೀತ ಕಾರ್ಯಕ್ರಮ ನಡೆಯಿತು.































