ನೇಣು ಹಾಕಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ; ಕೊಲೆ ಶಂಕೆ

ಕಲಬುರಗಿ,ನ.20-ಮನೆಯ ಮಲಗುವ ಕೋಣೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಬಾಲಕಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದೆ.
ಮಂಜುಳಾ ತಂದೆ ಗುಂಡೆರಾವ ನೀಲೂರ್ (17) ಎಂಬ ಬಾಲಕಿಯ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಡೆಯಲು ಬಾರದ ಮತ್ತು ದೈಹಿಕವಾಗಿ ಸದೃಢವಿಲ್ಲದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಾಲಕಿಯನ್ನು ಹೊಡೆದು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಮೃತ ಬಾಲಕಿಯ ತಾಯಿ ವಿಮಲಾಬಾಯಿ ನೀಲೂರ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ಹೊಲದ ಹಾದಿಯ ವಿಷಯಕ್ಕೆ ಕಲ್ಯಾಣಿ ತಂದೆ ಜಗದೀಶ, ಗುಂಡಪ್ಪ ತಂದೆ ಜಗದೀಶ ಮತ್ತು ಮಲ್ಲಿಕಾರ್ಜುನ ತಂದೆ ಜಗದೀಶ ಜಗಳ ತೆಗೆದಿದ್ದರೂ ಇವರೇ ತಮ್ಮ ಮಗಳನ್ನು ಹಳೆ ವೈಷ್ಯಮದಿಂದ ಹೊಡೆದು ಕೊಲೆ ಮಾಡಿ ನೇಣು ಹಾಕಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕಲ್ಯಾಣಿ, ಗುಂಡಪ್ಪ, ಮಲ್ಲಿಕಾರ್ಜುನ ವಿರುದ್ಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.