
ಜೇವರ್ಗಿ,ಮಾ.6-ಜೇವರ್ಗಿ ಪಟ್ಟಣದ ಮಹಾಲಕ್ಷ್ಮೀ ಕಂಪ್ಯೂಟರ್ ಕಿಯೋನಿಕ್ಸ್ ತರಬೇತಿ ಕೇಂದ್ರದಲ್ಲಿ ಗಾನಗಂಧರ್ವ, ಗಾನ ಗಾರುಡಿಗ, ಸ್ವರ ಮಾಂತ್ರಿಕ ಲಿಂ.ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ 112ನೇ ವರ್ಷದ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಜಯಂತಿ ಕಾರ್ಯಕ್ರಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಯಿತು. ಜನ್ಮ ದಿನದ ವಿಶೇಷತೆ ಕುರಿತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಎಸ್.ಕೆ.ಬಿರಾದರ್ ಬಾಲ್ಯ ಜೀವನ ಗಾನಗಂಧರ್ವ ಪರಮಪೂಜ್ಯ ಲಿಂಗೈಕ್ಯ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರು ಮಾರ್ಚ್ 3, 1914 ರಂದು ಹಾವೇರಿ ಜಿಲ್ಲೆಯ ಹಾನಗಲ್ ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ ಮತ್ತು ತಾಯಿ ಸಿದ್ಧಮ್ಮ. ಇವರ ಮೂಲ ಹೆಸರು ಪುಟ್ಟಯ್ಯಜ್ಜ ಸಂಗೀತದ ಜೊತೆಗೆ ಸಂಸ್ಕøತ, ಹಿಂದಿ, ಕನ್ನಡ, ಛಂದಸ್ಸು, ಕೀರ್ತನೆಗಳನ್ನು ಬ್ರೇಲ್ ಲಿಪಿಯ ಮೂಲಕ ಕಲಿತರು. ತಮ್ಮ ಜೀವನವನ್ನು ಗುರು ಸೇವೆಗಾಗಿ ಮುಡಿಪಾಗಿಟ್ಟರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಪುಟ್ಟರಾಜ ಶಿಕ್ಷಣಕ್ಕಾಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದ್ದರು.ಅವರ ತಾಯಿಯವರ ಅಚಾತುರ್ಯದಿಂದ ಚಿಕ್ಕವನಿದ್ದಾಗ ತಮ್ಮ ಎರಡು ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ, ಅವರು ಕುರುಡರಾಗಿದ್ದರು ಕೂಡ ಜಗತ್ತಿಗೆ ಸಂಗೀತದ ಬೆಳಕನ್ನು ಹೊನಲನ್ನು ಹರಿಸಿದ್ದಾರೆ.
ಸಮಾಜ ಸೇವೆ
ಗದುಗಿನ ವೀರೇಶ್ವರ ಪುಣ್ಯಾಶ್ರಮವು ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಆಶ್ರಮವಾಗಿದೆ. ಇದು ಕೇವಲ ಅಂಧರು, ಅನಾಥರು ಮತ್ತು ಬಡ ಮಕ್ಕಳ ಉನ್ನತಿಗಾಗಿ ಮೀಸಲಾದ ದತ್ತಿ ಸಂಸ್ಥೆಯಾಗಿದೆ. 1000 ಕ್ಕೂ ಹೆಚ್ಚು ಮಕ್ಕಳು ಆಶ್ರಮದಲ್ಲಿ ವಾಸಿಸುತ್ತಿದ್ದಾರೆ ಮತ್ತು ಉಚಿತವಾಗಿ ಆಹಾರವನ್ನು ನೀಡಲಾಗುತ್ತದೆ.
ಕರ್ನಾಟಕ ಮತ್ತು ವಿವಿಧ ರಾಜ್ಯಗಳ ಅಂದ ಅನಾಥ ಮಕ್ಕಳ ಶ್ರೇಯೋಭಿವೃದ್ಧಿ ಗೋಸ್ಕರ ಸ್ಥಾಪಿಸಿ ತ್ರಿವಿಧ ದಾಸೋಹವನ್ನು ಕಲ್ಪಿಸಿ ಅಂದ ಅನಾಥ ಮಕ್ಕಳ ಪಾಲಿಗೆ ದಾರಿ-ದೀಪವಾಗಿದ್ದರು, ಪುಟ್ಟರಾಜ ಗವಾಯಿಗಳವರು ಪುಟ್ಟರಾಜ ಗವಾಯಿ ಅವರು ಸಂಗೀತ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದವರು. ಜನರಿಗೆ ಸಂಗೀತ ಜ್ಞಾನವನ್ನು ನೀಡಲು ಮೀಸಲಾದ ಸಂಗೀತ ಶಾಲೆಯಲ್ಲಿ ತೆರೆದರು. ವಿಶೇಷವಾಗಿ ಅಂಗವಿಕಲರಿಗೆ, ಅಂಧ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಲಾಗುತ್ತದೆ.
ಪ್ರಶಸ್ತಿ ಪುರಸ್ಕಾರಗಳು.
ಪುಟ್ಟರಾಜ ಗವಾಯಿಗಳು ಮಾಡಿದ ಸಾಧನೆಗಳಿಗಾಗಿ 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 1993ರಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2000ನೇ ಇಸವಿಯಲ್ಲಿ ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ, ಶ್ರೀ ಜಯಚಾಮರಾಜ ಒಡೆಯರ್ ಅವರಿಂದ ಸನ್ಮಾನ, ಮೈಸೂರು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್ ಹ್ಯಾರಿಸ್ ಪ್ರಶಸ್ತಿಗಳು ಬಂದಿದೆ. 2010ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಪುಟ್ಟರಾಜ ಗವಾಯಿಗಳು ಸೆಪ್ಟೆಂಬರ್ 17, 2010ರ ರಂದು ತಮ್ಮ 97ನೆಯ ವಯಸ್ಸಿನಲ್ಲಿ ನಿಧನರಾದರು ಎಂದು ಮಾತನಾಡಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಜೇವರ್ಗಿಯ ಶರಣಾರ್ಥಿ ಕನ್ನಡಿಗರ ದಿನಪತ್ರಿಕೆಯ ವರದಿಗಾರರು, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕೋಶಾ ಧ್ಯಕ್ಷರಾದ ಸುರೇಶ್ ಕುಮಾರ್ ಹಿರೇಮಠ ರವರ ಹುಟ್ಟುಹಬ್ಬವನ್ನು ಕೂಡ ಆಚರಣೆ ಮಾಡಲಾಯಿತು. ಎಲ್ಲರೂ ಶುಭ ಕೋರಿ ಹಾರೈಸಿದರು.
ಗೌರವಾಧ್ಯಕ್ಷರಾದ ಚನ್ನಮಲ್ಲಯ್ಯ ಹಿರೇಮಠ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣ ಕುಮಾರ ಸಂಗಾವಿ, ಅಧ್ಯಕ್ಷರಾದ ಎಸ್ ಕೆ ಬಿರಾದರ್, ಗವಾಯಿಗಳಾದ ಬಸವಯ್ಯ ಶಾಸ್ತ್ರಿಗಳು ಸಂಪಾದಕರಾದ ಚಂದ್ರಶೇಖರ್ ಎಸ್ ಪಾಟೀಲ್, ವರದಿಗಾರರಾದಹಾಗೂ ಕರ್ನಾಟಕ ಜರ್ನಲಿಸ್ಟ್ಮ ಯೂನಿಯನ ತಾಲ್ಲೂಕು ಅಧ್ಯಕ್ಷ ಮರೆಪ್ಪ ಬೇಗಾರ್, ನಿಂಗನಗೌಡ ಪಾಟೀಲ್, ಆತ್ಮೀಯರಾದ ತರಬೇತಿ ಕೇಂದ್ರದ ವ್ಯವಸ್ಥಾಪಕ ಮುಖ್ಯಸ್ಥರಾದ ರಾಜಶೇಖರಯ್ಯ ಹಿರೇಮಠ್ , ಲಕ್ಷ್ಮೀ ಕಾಂತ್ ಮುದ್ದಾ, ಶಿವರಾಜ್ ಗುಜುಗೊಂಡ, ವಿನಾಯಕ್ ಹಡಪದ, ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ರಾಹುಲ್ ನೆಲೋಗಿ, ಮಲ್ಲಿಕಾರ್ಜುನ್ ಬಾರಿಗಿಡ, ಬಸವರಾಜ್ ಉಸ್ಥಿತರಿದ್ದರು.

























