
ಕಲಬುರಗಿ,ಫೆ.27-ತಾಲ್ಲೂಕಿನ ಫರಹತಾಬಾದ ಸೀಮಾಂತರದ ಹೊಲದಲ್ಲಿನ ಬೇವಿನ ಮರದ ಕೆಳಗೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪೊಲೀಸ್ ಠಾಣೆ ಪಿಐ ಹುಸೇನ್ ಭಾಷಾ, ಸಿಬ್ಬಂದಿಗಳಾದ ಸಾಜೀದ್ ಪಾಶಾ, ತಿರುಪತಿ, ಮಹೆಬೂಬ್, ಎಂ.ಆರ್.ಪಟೇಲ್, ಲಿಂಗರಾಜ, ಆನಂದ, ಕಲ್ಯಾಣಕುಮಾರ, ಲಕ್ಷ್ಮಣ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಯಶ್ವಂತ ಹತ್ತಿ, ಶರಣು ಹಾಗರಗಿ, ನಾಗಪ್ಪ ಪೂಜಾರಿ, ನಾಗಪ್ಪ ಭಂಕೂರ, ಬಸವರಾಜ ಶಬಶೆಟ್ಟಿ, ಶರಣಬಸಪ್ಪ ಸಜ್ಜನ್, ಶರಣಗೌಡ ದೇಸಾಯಿ, ಶರಣು ಅವಟಿ ಎಂಬುವವರನ್ನು ಬಂಧಿಸಿ 12620 ರೂ.ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























