
ಕಲಬುರಗಿ,ಅ.27-ನಗರದ ಈದ್ಗಾ ಮೈದಾನ ಹತ್ತಿರವಿರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆ ಪಿಐ ಕುಬೇರ್ ಎಸ್.ರಾಯಮಾನೆ, ಸಿಬ್ಬಂದಿಗಳಾದ ಮಲ್ಲಣ್ಣಗೌಡ, ಉಮೇಶ್, ಶರಣಬಸವ ಅವರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಪ್ರದೀಪ್ ಜಮಾದಾರ, ಸಂಗಮೇಶ ಗುಳಗಿ, ನಂದಕುಮಾರ ಬಿರಾದಾರ, ರಾಹುಲ್ ಬಿರಾದಾರ, ಅರುಣಕುಮಾರ ಹದನೂರ, ಸಿದ್ದಾರೂಢ ಬಿರಾದಾರ ಎಂಬುವವರನ್ನು ಬಂಧಿಸಿ 3,360 ರೂ.ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























