
ಕಲಬುರಗಿ,ಡಿ.10-ನಗರದ ನಯಾ ಮೊಹಲ್ಲಾ ಬಡಾವಣೆಯಲ್ಲಿರುವ ಸಿದ್ದಿ ಅಂಬರ ಕಟ್ಟೆಯ ಮೇಲೆ, ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹಡಗಿಲ್ ಹಾರುತಿ ಕ್ರಾಸ್ ಹತ್ತಿರವಿರುವ ಮಾಳಪ್ಪ ಪೂಜಾರಿ ಅವರ ಹೊಲದ ಹುಣಸೆ ಮರದ ಕೆಳಗೆ ಜೂಜಾಟವಾಡುತ್ತಿದ್ದ 11 ಜನರನ್ನು ಪೊಲೀಸರು ಬಂಧಿಸಿ 18,510 ರೂ.ನಗದು ಮತ್ತು ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ನಯಾ ಮೊಹಲ್ಲಾ ಬಡಾವಣೆಯಲ್ಲಿರುವ ಸಿದ್ದಿ ಅಂಬರ ಕಟ್ಟೆಯ ಮೇಲೆ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಐ ದಿಲೀಕುಮಾರ ಸಾಗರ, ಸಿಬ್ಬಂದಿಗಳಾದ ಸಿಕಂದರಖಾನ್, ಅಜ್ಮೀರ್ ಅಲಿ, ನಾಸಿರ್, ಮೊಹಸಿನ್ ಅವರು ದಾಳಿ ನಡೆಸಿ ಮೊಹಮ್ಮದ್ ಲಾಲ್ ಅಹ್ಮದ್, ಮೊಹಮ್ಮದ್ ವಸೀಂ, ಅಬ್ದುಲ್ ವಾಜೀದ್, ಮೊಹಮ್ಮದ್ ಖದೀರ್, ಶಹಬಾಜ್ ಅಹಮದ್ ಎಂಬುವವರನ್ನು ಬಂಧಿಸಿ 8410 ರೂ.ನಗದು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದರೆ, ಹಡಗಿಲ್ ಹಾರುತಿ ಕ್ರಾಸ್ ಹತ್ತಿರವಿರುವ ಮಾಳಪ್ಪ ಪೂಜಾರಿ ಅವರ ಹೊಲದ ಹುಣಸೆ ಮರದ ಕೆಳಗೆ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಶಿವುಕುಮಾರ, ಅಶೋಕ ಕಟಕೆ, ಶಿವಲಿಂಗ, ನಾಗರಾಜ ಅವರು ದಾಳಿ ನಡೆಸಿ ವಿಶ್ವನಾಥ ಪಾಟೀಲ, ಶಿವರಾಜ ವಡ್ವಡಗೆ, ಮಲ್ಲಿಕಾರ್ಜುನ ಕೋಳಿ, ಸಿದ್ದರಾಮ ಬಿರಾದಾರ, ಬಾಬುರಾವ ನಾಯಿಕೋಡಿ, ಪರಮೇಶ್ವರ ಕೊಟ್ಟಳ್ಳಿ ಎಂಬುವವರನ್ನು ಬಂಧಿಸಿ 10,100 ರೂ.ನಗದು, 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಚೌಕ್ ಮತ್ತು ಫರಹತಾಬಾದ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

























