ವಿಶೇಷ ಚೇತನ ಮಕ್ಕಳ ಯುಡಿಐಡಿಕಾರ್ಡಗಾಗಿ ಉಚಿತ ಆನ್‍ಲೈನ್ ಸೌಲಭ್ಯ

ಕಲಬುರಗಿ,ಸೆ.13: ಜಿಲ್ಲೆಯಲ್ಲಿಹಲವಾರು ಮಕ್ಕಳು ವಿಶೇಷ ಚೇತನರಾಗಿದ್ದು, ಅವರಿಗೆ ಮೂಲ ವಿವಿಧ ಇಲಾಖೆಗಳಿಂದ ಸೌಲಭ್ಯದೊರೆಯಬೇಕಾದರೆ ಯುಡಿ ಆಯ್‍ಡಿಕಾರ್ಡ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಸಮಾಜದಲ್ಲಿ ಸಾಮಾನ್ಯ ಮಕ್ಕಳಂತೆ, ನಾಗರಿಕರಂತೆ ಜೀವನ ಸಾಗಿಸಲು ಅವರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.ಕಲ್ಬುರ್ಗಿಜಿಲ್ಲೆಯಲ್ಲಿಅತಿ ಹೆಚ್ಚು ವಿಶೇಷಚೇತನ ಮಕ್ಕಳು ಇರಬಹುದುಎಂದುಅಂದಾಜಿಸಲಾಗಿದ್ದು.ಕೆಲವೇ ಮಕ್ಕಳು ಸೌಲಭ್ಯ ಪಡೆಯುತ್ತಿದ್ದುಅದರಂತೆ ಇನ್ನುಳಿದ ಮಕ್ಕಳು ಸೌಲಭ್ಯ ಪಡೆಯಬೇಕಾಗಿದೆ.ಕೆಲವೊಂದು ಮಕ್ಕಳು ಮನೆ ಹೊರಗಡೆ ಬರಲು ಆಗುವುದಿಲ್ಲ ಏಕೆಂದರೆಅವರುಅತಿ ಹೆಚ್ಚು ಅಂಗವೈಕಲ್ಯ ಹೊಂದಿದವರಾಗಿರುತ್ತಾರೆ.ವಿಶೇಷಚೇತನ ಮಕ್ಕಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಯೋಜನೆಗಳನ್ನು ಪ್ರಯೋಜನಗಳನ್ನು ಪಡೆಯಬೇಕಾದರೆ.ಮುಖ್ಯವಾಗಿ ಯುಡಿಐಡಿಕಾರ್ಡ್ ಅವಶ್ಯಕತೆಇದೆ.ಇಂಥ ಮಕ್ಕಳ ಯುಡಿಐಡಿಕಾರ್ಡ್ ಮಾಡಿಸಿಕೊಡಲು ಅಂತರ್ಜಾಲ ಮೂಲಕ ಅರ್ಜಿ ಹಾಕಲು ಯಾವುದೇ ಶುಲ್ಕ ಪಡೆಯದೆಉಚಿತವಾಗಿಅವರಿಗೆ ಪಾಳಾದ ಸುಭಾಶ್ಚಂದ್ರ ಪಾಟೀಲ್ ಸ್ಮಾರಕಜನಕಲ್ಯಾಣಟ್ರಸ್ಟ್ ವತಿಯಿಂದ ಸಹಕಾರ ನೀಡಲಾಗುವುದು.
ಸೆಪ್ಟೆಂಬರ್ 14ರಿಂದ ಪ್ರತಿರವಿವಾರ ಕಲಬುರಗಿ ನಗರದ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಲ್ಲಿರುವ ಶಿವಮಹಾಂತ ಆನ್ಲೈನ್ ಸೆಂಟರ್‍ದಲ್ಲಿಯುಡಿಐಡಿಕಾರ್ಡ್‍ಅರ್ಜಿಯನ್ನುಉಚಿತವಾಗಿ ಸಲ್ಲಿಸಲಾಗುವುದು, ವಿಶೇಷ ಚೇತನ ಮಕ್ಕಳಿಗೆ ಒಂದು ತಿಂಗಳವರೆಗೆ ಅರ್ಜಿ ಸಲ್ಲಿಸಲುಅವಕಾಶ ಮಾಡಿಕೊಡಲಾಗುತ್ತಿದೆ.ಫಲಾನುಭವಿಗಳು ಅಗತ್ಯ ದಾಖಲಾತಿಗಳಾದ ಫಲಾನುಭವಿಯ ಭಾವಚಿತ್ರ, ಆಧಾರ್‍ಕಾರ್ಡ್, ಕಡ್ಡಾಯವಾಗಿತರುವುದು.ಇದರ ಸದುಪಯೋಗ ಪಡೆಯಬೇಕೆಂದು “ಇದುಅನುಕಂಪವಲ್ಲ ಅವಕಾಶ”ವೆಂದು ಟ್ರಸ್ಟ್‍ನಅಧ್ಯಕ್ಷರು ತಿಳಿಸಿದರು.
ಮಾಹಿತಿಗಾಗಿ 9731555117, 9449986157 ಸಂಖ್ಯೆಯನ್ನು ಸಂಪರ್ಕಿಸಬಹುದು.