
ಕಲಬುರಗಿ,ಮಾ.27-ಮೀನು ಸಾಕಾಣಿಕೆ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ವಿವಿಧ ಬ್ಯಾಂಕ್ ಖಾತೆಗೆ ಹಂತಹಂತವಾಗಿ 3.53 ಲಕ್ಷ ರೂ.ಪಾವತಿಸಿಕೊಂಡು ಮೀನು ಸಾಗಾಣಿಕೆ ಸಬ್ಸಡಿ ಕೊಡಿಸದೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೀನು ಸಾಗಾಣಿಕೆ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ಗುಂಡಪ್ಪ ಪೂಜಾರಿ ಎಂಬುವವರೆ ವಂಚನೆ ಮಾಡಿದ್ದಾರೆ ಎಂದು ಶಹಾಬಜಾರದ ವಿಠ್ಠಲ ಚವ್ಬಾಣ್ ಎಂಬುವವರು ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ಪ್ರಕರಣವನ್ನು ಚೌಕ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮೀನು ಸಾಗಾಣಿಕೆ ಸಬ್ಸಡಿ ಕೊಡಿಸುವುದಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ 3.53 ಲಕ್ಷ ಜಮಾ ಮಾಡಿಸಿಕೊಂಡ ಗುಂಡಪ್ಪ ಪೂಜಾರಿ ಅವರು ಸಬ್ಸಡಿಯು ಕೊಡಿಸದೆ, ಹಣವು ಮರಳಿ ನೀಡದೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.
ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.



























