
ಹುಮನಾಬಾದ್:ಅ.25:ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಿನ್ನಲೆಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ಇಲ್ಲಿಯವರೆಗೆ ಹೇಳಿಕೆಯಾಗಲಿ, ಬಹಿರಂಗ ಖಂಡನೆಯಾಗಲಿ ನೀಡಿಲ್ಲ ಕೇವಲ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದರೆ ಸಾಲದು ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಗೌತಮ್ ಚವ್ಹಾಣ್ ಶೆಡೋಳ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಮಹಾ ರಾಷ್ಟ್ರ ಮೂಲದ ವ್ಯಕ್ತಿ ರಾಜ್ಯದ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಕೊಲೆ ಬೆದರಿಕೆ ಹಿನ್ನೆಲೆ ಅ.20ರಂದು ದಲಿತ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ನಮ್ಮ ಹೋರಾಟದಲ್ಲಿ ಕೆಲ ರಾಜಕೀಯ ವ್ಯಕ್ತಿಗಳು ದಲಿತ ಸಂಘಟನೆ ಒಕ್ಕೂಟದಲ್ಲಿ ಭಾಗಿಯಾಗಿ ದಲಿತ ಸಂಘಟನೆಯಿಂದ ನಡೆಸುತ್ತಿರುವ ಹೋರಾಟಕ್ಕೆ ನಾವು ಕೈಜೋಡಿಸುವುದಾಗಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್,ಯುವಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿ ಗಳು ಸುದ್ದಿಗೋಷ್ಠಿ ನಡೆಸಿ ದಲಿತ ಸಂಘಟನೆಗಳಿಗೆ ಬೆಂಬಲ ಸೂಚಿಸುವುದಾಗಿ ಹೇಳಿದರು.
ಮಾತು ಎತ್ತಿದರೆ ಖರ್ಗೆ ಸಾಹೇಬ್ರು ಎಂದು ಹೇಳುವ ಪಾಟೀಲ್ ಪರಿವಾರ ತಮ್ಮ ಸ್ವಂತ ಶಕ್ತಿ ಹಾಗೂ ತಮ್ಮ ಪಕ್ಷದ ಧ್ವಜದ ಕೆಳಗೆ ಪ್ರತಿಭಟನೆ ಮಾಡುವ ಶಕ್ತಿ ಕಳೆದುಕೊಂಡಂತಾಗಿದೆ. ಮಾಜಿ ಸಚಿವ ರಾಜಶೇಖರ ಪಾಟೀಲ್ ಕುಟುಂಬ ದುರ್ಬಲ ಆಗುತ್ತಿದೆ ಎನ್ನುವಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಬಲಿಷ್ಠವಾಗಿರುವ ಕಾಂಗ್ರೆಸ್ ಪಕ್ಷ ಹುಮನಾಬಾದ್ ಕ್ಷೇತ್ರದಲ್ಲಿದೆ ಎಂದು ನಾವು ತಿಳಿದಿದ್ದೇವೆ ಎ0ದರು.
ಆರ್‍ಎಸ್‍ಎಸ್ ಪಥ ಸಂಚಲನಕ್ಕೆ ಹೆದರಿ ನಾವು
ಪ್ರತಿಭಟನೆಯ ವೇದಿಕೆಯ ಮೇಲೆ ನಿಂತು ಮಾತನಾಡಿದರೆ ಮುಂದೆ ನನ್ನ ಮತಗಳು ಕೈ ತಪ್ಪಿ ಹೋಗುತ್ತೆ. ಸಂಘದ ವಿರುದ್ಧ ನಡೆದುಕೊಂಡು ಹೋದ ಹಾಗಾಗುತ್ತೆ ಎಂದು ಮನೆಯಲ್ಲಿ ಕುಳಿತು ಕೊಂಡಿದ್ದಾರೆ ಹೊರತು ಖರ್ಗೆ ಕುಟುಂಬದವರ ಜೊತೆಗೆ ಹಾಗೂ ದಲಿತರ ಜೊತೆ ತಾವು ಇಲ್ಲ ಎಂಬಂತಾಗಿದೆ ಎಂದು ಆರೋಪಿಸಿದರು.
2023ರ ಚುನಾವಣೆಯಲ್ಲಿ ಬೇಡ ಜಂಗಮ ಸಮಾಜದ ಪರವಾಗಿ ಎಸ್‍ಸಿ ಜಾತಿಯಲ್ಲಿ ಸೇರ್ಪಡೆ ಮಾಡುವಂತೆ ಶಿಫಾರಸ್ಸು ಪತ್ರ ನೀಡಿದ್ದೀರಿ. ಅದೇ ನಿಮ್ಮ ಸೋಲಿಗೆ ಕಾರಣವಾಯಿತು ಎಂದು ಅರ್ಥ ಮಾಡಿಕೊಳ್ಳಿ. ದಲಿತ ಸಮಾಜದ ಅಧಿಕಾರಿ, ಸಂಸ್ಥೆ, ಜನರ ಮೇಲೆ ದೌರ್ಜನ್ಯ ಮಾಡಿದಲ್ಲಿ ಬರುವ2028ರ ಚುನಾವಣೆಯಲ್ಲೂ ತಮ್ಮನ್ನು ಸೋಲಿಸಿ ಮನೆಯಲ್ಲಿ ಕೂಡಿಸಬೇಕಾಗುತ್ತದೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.





























