
ಕಲಬುರಗಿ:ಅ.20:ಇತ್ತೀಚೆಗೆ ವೀರೇಂದ್ರ ಪಾಟೀಲ ಬಡಾವಣೆಯಲ್ಲಿರುವ ಟರ್ಪ್ ಕೋರ್ಟ್ ಕ್ರೀಡಾಂಗಣದಲ್ಲಿ,ಶಾಲಾ ಶಿಕ್ಷಣ ಇಲಾಖೆಯು ಆಯೋಜಿಸಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. 14 ವರ್ಷ ಮತ್ತು 17 ವರ್ಷ ವಯೋಮಿತಿ ಕೆಳಗಿನ ಬಾಲಕರ ಎರಡೂ ತಂಡಗಳು ದ್ವಿತೀಯ ಸ್ಥಾನ ಪಡೆದಿವೆ.
ಶಾಲೆಯ ದೈಹಿಕ ಶಿಕ್ಷಕರಾದ ಮಹೇಶಕುಮಾರ ಭಜಂತ್ರಿ ಹಾಗೂ ಬಸವರಾಜ ಮಜ್ಜಗೆ ಮಕ್ಕಳಿಗೆ ತರಬೇತಿ ನೀಡಿದ್ದರು. ಮಕ್ಕಳ ಈ ಸಾಧನೆಗೆ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಶಿಕ್ಷಕರು ಹಾಗೂ ಪೆÇೀಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.