
ಬೀದರ್: ಅ.20:ನಶಿಸಿ ಹೋಗುತ್ತಿರುವ ಜನಪದ ಸಾಹಿತ್ಯ ಸಂಸ್ಕøತಿಯ ಸಂರಕ್ಷಕರು ಮತ್ತು ರಾಯಭಾರಿಗಳಾಗುವ ಕಾರ್ಯದಲ್ಲಿ ಭಾರತೀಯರಾದ ನಾವೆಲ್ಲರೂ ಭಾಗವಹಿಸಬೇಕು ಎಂದು ಹಿರಿಯ ರಂಗಕರ್ಮಿ ಮತ್ತು ಚಲನಚಕ್ರ ನಟ ಅನಂತಕೃಷ್ಣ ದೇಶಪಾಂಡೆ ಅವರು ಕರೆ ನೀಡಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆಯ ಸಹಯೋಗದಲ್ಲಿ ನಡೆದ “ಶಾಂತಮ್ಮ ಬಲ್ಲೂರ ನನ್ನವ್ವನ ಜನಪದ ಸಿರಿ” ಸಂಪಾದಿತ ಕೃತಿಯ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಜನಪದ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳು ಅಡಗಿವೆ. ಬೇಂದ್ರೆಯವರು ತಮ್ಮ ಕೃತಿಗಳಲ್ಲಿ ಈ ಮೌಲ್ಯಗಳನ್ನು ಬಳಸಿಕೊಂಡು ಜನಮನದಲ್ಲಿ ಶಾಶ್ವತ ನೆಲೆ ಸಾಧಿಸಿದ್ದಾರೆ ಎಂದು ಹೇಳಿದರು.
ಶಾಂತಮ್ಮ ಬಲ್ಲೂರ ಅವರು ತಮ್ಮ ತಾಯಿ ಹಾಡಿದ ಜನಪದ ಹಾಡುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಅಧ್ಯಕ್ಷ ನಾಗಯ್ಯ ಸ್ವಾಮಿ, ಪೆÇ್ರ. ರಾಜೇಂದ್ರ ಬಿರಾದಾರ, ಕೆ. ಸತ್ಯಮೂರ್ತಿ ಅವರು ಅತಿಥಿಗಳಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಪೆÇ್ರ. ಜಗನ್ನಾಥ ಹೆಬ್ಬಾಳೆ ವಹಿಸಿ, ಶಾಂತಮ್ಮ ಬಲ್ಲೂರ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಪುಸ್ತಕ ಸಂಪಾದಕಿ ಶಾಂತಮ್ಮ ಬಲ್ಲೂರ ಅವರು ತಮ್ಮ ತಾಯಿಯ ಹಾಡುಗಳಿಂದಲೇ ಪ್ರೇರಿತನಾಗಿ ಈ ಕೃತಿ ರಚನೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ, ಪಂಚಾಕ್ಷರಿ ಪುಣ್ಯಶೆಟ್ಟಿ, ತುಳಜಮ್ಮ ಬಲ್ಲೂರ ಸೇರಿದಂತೆ ಅನೇಕರಿದ್ದರು.
ಪ್ರಸ್ತಾವಿಕ ಭಾಷಣವನ್ನು ಡಾ. ಸುನಿತಾ ಕೂಡ್ಲಿಕರ, ಸ್ವಾಗತ ಅಂಬಿಕಾ ಬಿರಾದಾರ, ನಿರೂಪಣೆ ವೈಜಿನಾಥ ಪಾಟೀಲ ಹಾಗೂ ಸ್ವಾಗತ ಗೀತೆ ಮಲ್ಲಮ್ಮ ಸಂತಾಜಿ ಹಾಡಿದರು.
ನೂರಾರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.