
ಕಲಬುರಗಿ,ಜ.31-ಹಣಕಾಸಿನ ಸಮಸ್ಯೆಯಿಂದ ನೇಣು ಹಾಕಿಕೊಂಡು ಪತ್ರಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಷ್ಠಗಾ ಹತ್ತಿರ ಇಂದು ನಡೆದಿದೆ.
ಪ್ರಭುಲಿಂಗ ನೀಲೂರೆ (52) ಆತ್ಮಹತ್ಯೆ ಮಾಡಿಕೊಂಡವರು. ರಾಜ್ಯ ಮಟ್ಟದ ದಿನ ಪತ್ರಿಕೆಯೊಂದರಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ನೀಲೂರೆ ಅವರು ಲೇಖಕರಾಗಿಯೂ ಹೆಸರು ಮಾಡಿದ್ದರು.
ಹಣಕಾಸಿನ ಸಮಸ್ಯೆಯೇ ಆತ್ಯಹತ್ಯೆಗೆ ಕಾರಣವೆನ್ನಲಾಗಿದ್ದು, ಇಂದು ಬೆಳಿಗ್ಗೆ ಅಷ್ಠಗಾ ಹತ್ತಿರದ ಹೊಲದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಸಬ್-ಅರ್ಬನ್ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























