ತಂದೆ ಎಂದರೆ ಮೊದಲ ಗುರು


ಧಾರವಾಡ.ಸೆ.೧೯:ರಾಜೀವ ಗಾಂಧಿ ಅಃSಇ ಶಾಲೆಯಲ್ಲಿ ತಂದೆಯAದಿರ ದಿವಸ(ಈಚಿಣheಡಿs ಆಚಿಥಿ )ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಜಿಮಹಾಪೌರರು ಸಭಾನಾಯಕರಾದ ಈರೇಶ ಅಂಚಟಗೇರಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಮಕ್ಕಳ ತಂದೆಯAದಿರು ತಮ್ಮ ಮಕ್ಕಳ ಜತೆ ವೇದಿಕೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು . ಸಭೆಯನ್ನುದ್ದೇಶಿಸಿ ಮಾತನಾಡಿದ ಅಂಚಟಗೇರಿಯವರು ತಂದೆ ಎಂದರೆ ನಮ್ಮ ಮೊದಲ ಗುರು, ಮೊದಲ ಸ್ನೇಹಿತ ಮತ್ತು ಜೀವನದ ಮೊದಲ ನಾಯಕ.


ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯ ಹಿಂದೆ ಅವರ ಆಶೀರ್ವಾದ ಮತ್ತು ಪ್ರೋತ್ಸಾಹ ಇರುತ್ತದೆ. ತಂದೆಯವರು ನಮಗೆ ಕಠಿಣತೆ ಕಲಿಸುತ್ತಾರೆ, ಏಕೆಂದರೆ ಜೀವನದಲ್ಲಿ ಬಲಿಷ್ಠರಾಗಬೇಕೆಂದು ಅವರಿಗೆ ಗೊತ್ತು ಎಂದರು.


ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಮಾಜಿಮಹಾಪೌರರು ಹಾಗು ಗಣ್ಯಮಾನ್ಯರು ಬಹುಮಾನ ಹಾಗು ಪ್ರಶಸ್ತಿ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಬಸವರಾಜ ತಾಳಿಕೋಟಿ ಎಸ ರಾಧಾಕೃಷ್ಣನ್ ಪ್ರಾಂಶುಪಾಲರು ಹೇಮಂತ ಅಂಗಡಿ ಮುಮತಾಜ ಬಾಳೆಕುಂದ್ರಿ ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು