
ಭಾಲ್ಕಿ: ಫೆ.17:ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮ ಸಮೀಪದ ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ತಂದೆ- ಮಗ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಮೃತರು ಹಳ್ಳಿಖೇಡ (ಬಿ) ಗ್ರಾಮದ ನಿವಾಸಿಗಳಾದ ವಿಶ್ವನಾಥ ಅಂಬಣ್ಣ ((50) ಅಂಬರೀಶ ವಿಶ್ವನಾಥ (24) ಆಗಿದ್ದು, ಇವರಿಬ್ಬರು ಬೀದರ್‍ನಲ್ಲಿ ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಅಂಬರೀಶ ಕೈಕಾಲು ತೊಳೆಯಲು ಕಾರಂಜಾ ಜಲಾಶಯದ ಕಾಲುವೆಗೆ ಇಳಿದಿದ್ದಾನೆ.
ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ತಂದೆ ವಿಶ್ವನಾಥ ಕಾಲುವೆಗೆ ಇಳಿದಿದ್ದಾರೆ.
ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ನೈಜ ಕಾರಣ ಕುರಿತು ತನಿಖೆ ನಡೆಯುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.




























