Home ಜಿಲ್ಲೆ ರೈತರ ಒಗ್ಗಟ್ಟಿನ ಹೋರಾಟ ಅಗತ್ಯ : ಎಸ್.ಎನ್ ಶಿವಣಕರ್

ರೈತರ ಒಗ್ಗಟ್ಟಿನ ಹೋರಾಟ ಅಗತ್ಯ : ಎಸ್.ಎನ್ ಶಿವಣಕರ್

ಕಮಲನಗರ:ಮಾ.15: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಎಸ್.ಎನ್.ಶಿವಣಕರ್ ಹೇಳಿದರು.

ಪಟ್ಟಣದ ಡಾ. ಚನ್ನಬಸವ ಪಟ್ಟದ್ದೇವರು ಗ್ರಂಥಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಜಲ ಸಂಪನ್ಮೂಲ ಯೋಜನೆ ಜಾರಿ ವಿಷಯದಲ್ಲಿ ಜಾಣಕುರುಡು ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ರೈತ ವಿರೋಧಿ ಧೋರಣೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟಕ್ಕೆ ಯುವಕರನ್ನು ಚಳವಳಿಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ರೈತ ಸಂಘ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೂರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಮಲನಗರ ತಾಲ್ಲೂಕು ಘಟಕ ಅಧ್ಯಕ್ಷ ಪ್ರವೀಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದರು.

ರೈತ ಸಂಘ ಜಿಲ್ಲಾ ಕಾರ್ಯಧ್ಯಕ್ಷ ಶ್ರೀಮಂತ ಬಿರಾದಾರ, ಬೀದರ್ ಅಧ್ಯಕ್ಷ ನಾಗಯ್ಯ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶಂಕ್ರೆಪ್ಪ ಪಾರಾ, ಔರಾದ್ ತಾಲ್ಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಯಶವಂತ ಬಿರಾದಾರ, ಶ್ರೀರಂಗ ಪರಿಹಾರ, ವೈಜಿನಾಥ ವಡ್ಡೆ, ಮನೋಹರ ಬಿರಾದಾರ, ಉಮಾಕಾಂತ ಮೋಳಕೆರೆ ಸೇರಿದಂತೆ ಚಂದ್ರಕಾಂತ ಸಂಗಮೆ, ಮಹಾದೇವ ಚಲವಾ, ಸಂಗಮೇಶ ಜುಲ್ಫೆ, ಉಮಾಕಾಂತ ಬಚ್ಚಣ್ಣಾ, ದತ್ತ ಚಾಂಗುಣೆ, ಸಂತೋಷ ಕಾಡೋದೆ, ಮಹೇಶ ಬಿರಾದಾರ, ರಾಜಕುಮಾರ ವಡಗಾಂವೆ, ಸಿದ್ರಾಮಪ್ಪ ಬಿರಾದಾರ, ದೇವೇಂದ್ರ, ಮಡಿವಾಳಪ್ಪ ಸೇರಿದಂತೆ ರೈತ ಸಂಘಟನೆ ಗ್ರಾಮ ಘಟಕ ವಿವಿಧ ಗ್ರಾಮದ ಅಧ್ಯಕ್ಷರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

ಪದಾಧಿಕಾರಿಗಳ ಪದಗ್ರಹಣ:

ರಾಮೇಶ್ವರ ಶಿವಣಕರ್(ಅಧ್ಯಕ್ಷರು), ಮನೋಜಕುಮಾರ ಪೆÇಲೀಸ್ ಪಾಟೀಲ (ಉಪಾಧ್ಯಕ್ಷ), ಧನರಾಜ ಭವರಾ(ಕಾರ್ಯದರ್ಶಿ), ಗುಂಡಪ್ಪ ದಾನಾ(ಗೌರವಧ್ಯಕ್ಷರು), ವಿಜಯಕುಮಾರ ಶೇಟಕಾರ(ಉಪಾಧ್ಯಕ್ಷರು), ನಾಗೇಶ ರಾಂಪೂರೆ(ಸದಸ್ಯರು), ಅಶೋಕ (ಸಹಕಾರ್ಯದರ್ಶಿ), ಎಸ್‍ಟಿ ಅಧ್ಯಕ್ಷ ಸುನೀಲ ಮೇತ್ರೆ, ಎಸ್ಸಿ ಘಟಕ ಅಧ್ಯಕ್ಷ ಅಭಿನವ ಘಾಗರೆ, ಒಬಿಸಿ ಅಧ್ಯಕ್ಷ ಗುರುನಾಥ ಬಿರಾದಾರ, ಮಾಧ್ಯಮ ಪ್ರತಿನಿಧಿ ಮನೋಜ ಹಿರೇಮಠ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಶಾಂತ ಖಾನಾಪುರೆ ನಿರೂಪಿಸಿದರು. ಮನೋಜ ಪೆÇಲೀಸ್ ಪಾಟೀಲ ಸ್ವಾಗತಿಸಿದರು. ರಾಮೇಶ್ವರ ವಂದಿಸಿದರು.