
ಕಲಬುರಗಿ, ಫೆ.26: ಅನ್ನದಾತ ರೈತರ ಸಮಸ್ಯೆಗಳನ್ನು ಬಗೆಹರಿಸುವುದೇ ಜೆಸ್ಕಾಂ ಸಂಸ್ಥೆಯ ಪ್ರಥಮ ಆದ್ಯತೆ ಎಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹಾರವಾಳ ಅವರು ತಿಳಿಸಿದರು
ಅಫಜಲಪುರ ತಾಲ್ಲೂಕಿನ ಹೇರೂರು ಹಾಗೂ ಫರಹತಾಬಾದ್ ಗ್ರಾಮದ ರೈತರು ತಮ್ಮ ಭಾಗದಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದ ಕಾರಣ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ. ರೈತರ ಅಹವಾಲುಗಳನ್ನು ಆಲಿಸಿದ ಜೆಸ್ಕಾಂ ಅಧ್ಯಕ್ಷರು, ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಸ್ಥಳದಲ್ಲೇ ಕರೆಸಿ ಚರ್ಚೆ ನಡೆಸಿ, ರೈತರ ಪಂಪ್‍ಸೆಟ್‍ಗಳಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಸೂಚಿಸಿದರು.
ಯಾವುದೇ ತಾಂತ್ರಿಕ ಅಡೆತಡೆಯಿಲ್ಲದೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು, ಗ್ರಾಮೀಣ ಭಾಗದ ವಿದ್ಯುತ್ ಸಬಲೀಕರಣಕ್ಕೆ ಜೆಸ್ಕಾಂ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದರು.



























