
ನವಲಗುಂದ,ನ20: ಕಳೆದ ಮೂರು ವರ್ಷಗಳ ಕಾಲ ನವಲಗುಂದ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹ ಅಧಿಕಾರಿಯಾಗಿ ಭಾಗ್ಯಶ್ರೀ ಜಹಗೀರದಾರ ಅವರು ಕರ್ತವ್ಯ ನಿರ್ವಹಿಸಿರುವುದು ಅವಿಸ್ಮರಣೀಯ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಿರ್ಗಮಿತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡ ಬೀಳ್ಕೊಡುಗೆ ಹಾಗೂ ಅದೇ ಜಾಗಕ್ಕೆ ಪಿ ಆರ್ ಬಡೇಕಾನವರ ನೂತನ ಕಾರ್ಯನಿರ್ವಾಹಕ ಅಧಿಕಾರಿ ಅಧಿಕಾರ ಸ್ವೀಕಾರ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಹಾಯಕ ನಿರ್ದೇಶಕರುಗಳಾದ ಜಗದೀಶ ಹಡಪದ, ಸಿದ್ದು ಐರಾಣಿ ರಾಜೇಂದ್ರ ಹುಕ್ಕೇರಿ , ರಾಧಾ ಕುಲಕರ್ಣಿ, ಎಸ್ ಬಿ ತೋಟದ, ಶಿವಾನಂದ ಗುಡಿಸಲಮನಿ, ಸೇರಿದಂತೆ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು.































