ಸುಳ್ಳು ಪ್ರಕರಣ, ಸಂಘಟನೆ-ಉದ್ಯೋಗದಿಂದ ಹೊರದಬ್ಬಲು ಪ್ರಯತ್ನ-ರವೀಂದ್ರ ಬಾಬು ಆರೋಪ

ಬೆಂಗಳೂರು,ಜೂ೧೧: ಏಪ್ರಿಲ್ ೧೮, ೨೦೨೫ ರಂದು ನನ್ನ ಹಾಗೂ ನನ್ನ(ರಾಜಗೋಪಾಲ್ ಬಿ.ಎಂ.) ಹಾಗೂ ನನ್ನ ಸಹೋದರ ಮಣಿಪಾಲ್ ಹಾಸ್ಪಿಟಲ್ಸ್ ಲೇಬರ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ರವೀಂದ್ರ ಬಾಬು ಬಿ.ಎಂ. ಮೇಲೆ ಹಲವು ಆರೋಪಗಳನ್ನು ಮಾಡಿ ಜೀವನ್ ಭೀಮಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಸಂಪೂರ್ಣ ಸುಳ್ಳು ಹಾಗೂ ನನ್ನನ್ನು ಕಾರ್ಮಿಕ ನಾಯಕ ಸ್ಥಾನದಿಂದ ನಿವಾರಿಸಬೇಕೆಂಬ ದುರುದ್ದೇಶದ ಷಡ್ಯಂತ್ರದ ಭಾಗವಾಗಿದೆ. ಮೂರು ದಶಕಗಳ ಕಾಲ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿರುವ ನಮ್ಮನ್ನು ಕ್ರಿಮಿನಲ್ ಪ್ರಕರಣಕ್ಕೆ ಸಿಲುಕಿಸುವ ಹುನ್ನಾರ ನಡೆದಿದೆ ಎಂದು ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಮತ್ತು ಮಣಿಪಾಲ್ ಆಸ್ಪತ್ರೆಗಳ ಲೇಬರ್ ಅಸೋಸಿಯೇಷನ್ (ನೋಂ) ಅಧ್ಯಕ್ಷ ರಾಜಗೋಪಾಲ್ ಬಿ.ಎಂ ತಿಳಿಸಿದ್ದಾರೆ.


ಅವರಿಂದು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ನಾನು ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಮತ್ತು ಮಣಿಪಾಲ್ ಆಸ್ಪತ್ರೆಗಳ ಲೇಬರ್ ಅಸೋಸಿಯೇಷನ್ (ನೋಂ) ಅಧ್ಯಕ್ಷನಾಗಿದ್ದೇನೆ. ಈ ಹುದ್ದೆಯಿಂದ ನನ್ನನ್ನು ತೆಗೆದು ಹಾಕಬೇಕೆಂದು ಅಲ್ಲಿನ ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ. ಅದಕ್ಕೆ ನಾನು ಪರಿಶಿಷ್ಟ ಜಾತಿಗೆ ಸೇರಿದ್ದು ಕಾರ್ಮಿಕ ಸಂಘಟನೆಯಲ್ಲಿರುವುದು ಹಲವರಿಗೆ ಇಷ್ಟವಾಗುತ್ತಿಲ್ಲ. ಆದ್ದರಿಂದ ನಾನು ಹಾಗೂ ನನ್ನ ಸಹೋದರ ಉದ್ಯೋಗಕ್ಕೆ ಹಾಜರಿರದ ದಿನದಲ್ಲಿ ಏಪ್ರಿಲ್೧೮ರಂದು ಸಂಜೆ ೮ ಗಂಟೆಗೆ ನನ್ನ ಸಹೋದ್ಯೋಗಿಯೊಬ್ಬಳನ್ನು ಬಲವಂತವಾಗಿ ಕೈ ಹಿಡಿದು ಎಳೆದು ಆಕೆಯನ್ನು ನನ್ನ ಬೈಕ್ ಮೇಲೆ ಕುಳಿತು ಆಕೆಯ ಮನೆಗೆ ಕರೆದೊಯ್ಯಲು ಪ್ರಯತ್ನಿಸಿದೆ ಎಂದು ದೂರಲಾಗಿದೆ. ವಾಸ್ತವದಲ್ಲಿ ಅಂದು ಗುಡ್ ಫ್ರೈಡೇ ಹಬ್ಬವಾಗಿದ್ದು ನಾನು ಪ್ರಾರ್ಥನೆಗೆ ದೇವಾಲಯದಲ್ಲಿದ್ದೆ. ಹೀಗಿರುವಾಗ ನಾನು ಕೈ ಹಿಡಿದು ಎಳೆಯಲು ಹೇಗೆ ಸಾಧ್ಯ?


ಆದಾಗ್ಯೂ ನಾವಿಬ್ಬರೂ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು ಪೊಲೀಸರ ತನಿಖೆಯಿಂದ ನಿಜ ಬಯಲಾಗಲಿದೆ. ನಮ್ಮ ಮೊಬೈಲ್ ಟವರ್ ಲೊಕೇಷನ್ ಕಂಡುಕೊಂಡರೂ ವಾಸ್ತವ ಹೊರಬರುತ್ತದೆ. ಇದು ನಮ್ಮನ್ನು ಕಾರ್ಮಿಕ ಸಂಘಟನೆಯಿಂದ ಹಾಗೂ ಉದ್ಯೋಗದಿಂದ ಹೊರದಬ್ಬಲು ಅಲ್ಲಿನ ಕೆಲ ಉದ್ಯೋಗಿಗಳು ಮಾಡಿರುವ ಷಡ್ಯಂತ್ರವಾಗಿದ್ದು ಪ್ರಕರಣದಲ್ಲಿ ಯಾವುದೇ ಹುರುಳಿಲ್ಲದಿದ್ದರೂ ಬಿಟಿವಿ ಯೂಟ್ಯೂಬ್ ಚಾನೆಲ್ ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಿ ನಮ್ಮ ಗೌರವಕ್ಕೆ ಧಕ್ಕೆ ತಂದಿದ್ದು ನಮ್ಮ ಜೊತೆಯಲ್ಲಿ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆ ಹೆಸರಿಗೂ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಈಗಾಗಲೇ ನಾವು ಬಿಟಿವಿಗೆ ಮಾನನಷ್ಠ ಮೊಕದ್ದಮೆಯ ನೋಟಿಸ್ ಕಳುಹಿಸಿದರೂ ಅದನ್ನು ಸ್ವೀಕರಿಸದೆ ಹಿಂದಿರುಗಿಸಿದ್ದಾರೆ. ಆದ್ದರಿಂದ ನಮ್ಮ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಲೇಬರ್ ಸಂಘದ ಜಂಟಿ ಕಾರ್ಯದರ್ಶಿಗಳು ರವೀಂದ್ರ ಬಾಬು ಸುದ್ದಿಗೋಷ್ಟಿಯಲ್ಲಿ ಇದ್ದರು.