ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡಿ

ಕೆ.ಆರ್. ಪುರ,ಆ.೨೦- ವೀರಶೈವ ಲಿಂಗಾಯತರ ಕುಟುಂಬದಲ್ಲಿ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆಯನ್ನು ಮಾಡಬೇಕು ಎಂದು ಶ್ರೀ ಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ ಶ್ರೀ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ ಅವರು ತಿಳಿಸಿದರು


ಮಹದೇವಪುರ ಕ್ಷೇತ್ರದ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಟಂನಲ್ಲೂರಿನಲ್ಲಿ ಏರ್ಪಡಿಸಿದ್ದ ಲೋಕಕಲ್ಯಾಣಾರ್ಥವಾಗಿ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಮಾಸದ ಮನೆ-ಮನೆಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ – ವಚನ ಪ್ರವಚನ ಕಾರ್ಯಕ್ರಮದಲ್ಲಿ ಆಶಿರ್ವದಿಸಿ ಮಾತನಾಡಿದರು.


ನಿತ್ಯ ಶಿವ ಪೂಜೆ ಮಾಡುವ ಒಂದು ಪದ್ದತಿ ನಮ್ಮ ಧರ್ಮದಲ್ಲಿದೆ. ಪ್ರತಿಯೊಬ್ಬ ವೀರಶೈವ ಲಿಂಗಾಯತರ ಕುಟುಂಬದಲ್ಲಿ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆಯನ್ನು ಮಾಡಬೇಕು ಎಂಬುದನ್ನು ಜಾಗೃತಿ ಮೂಡಿಸುವ ಸಲುವಾಗಿ ಸಮಾಜದಲ್ಲಿ ಹಲವಾರು ಮತಗಳು ಇವೆ, ಅನೇಕ ರೀತಿಯಲ್ಲಿ ಧರ್ಮಗಳಿವೆ, ಅವರವರ ಧರ್ಮ ಅವರಿಗೆ ಶ್ರೇಷ್ಠವಾಗಿರುತ್ತದೆ. ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾನೆ ಅವನನ್ನು ಪರಮಾತ್ಮ ರಕ್ಷಣೆ ಮಾಡುತ್ತಾರೆ.


ನಮ್ಮ ನಮ್ಮ ಧರ್ಮದ ರಕ್ಷಣೆ ಮಾಡಬೇಕು ಉತ್ತಮ ಸಮಾಜ ನಡೆಸಬೇಕು ಎಂದರು.


ಮಹದೇವಪುರ ಕ್ಷೇತ್ರ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಹೇಂದ್ರ ಮೋದಿ ಅವರು ಮಾತನಾಡಿ, ಶ್ರಾವಣ ಮಾಸದ ಕಾರ್ಯಕ್ರಮ ಸತತ ೧೮ ವರ್ಷದಿಂದ ನಡೆಸಲಾಗುತ್ತಿದ್ದು, ಸಮಾಜದ ಬಂಧುಗಳು ಒಂದೆಡೆ ಸೇರಿ ಶಿವನ ಜ್ಞಾನ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯಕ್ಕಾಗಿ ಮಕ್ಕಳಿಗೆ ಸಂಸ್ಕಾರ ಬೆಳೆಸಲು ಒಂದು ಉತ್ತಮ ವೇದಿಕೆ, ಪ್ರತಿವರ್ಷವೂ ಹೀಗೆಯೇ ಮುಂದುವರಿಸಿಕೊಂಡು ಹೋಗುವ ಗುರಿಯಿದೆ ಎಂದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಮಹೇಂದ್ರ ಮೋದಿ,ಬಿ.ಎನ್.ಪ್ರಕಾಶ್, ಪಂಚಾಕ್ಷರಿ ಹಿರೇಮಠ್, ಬೈರತಿ ಕುಮಾರ್, ಕಾರ್ತಿಕ್, ಶಿವುಗುರು, ರಘು ಕುಮಾರ್, ಮೋಹನ್, ಯೋಗೇಶ್ ಆರಾಧ್ಯ, ಪ್ರಸಾದ್ ಬಾಬು ಭಕ್ತರು ಪದಾಧಿಕಾರಿಗಳು ಇದ್ದರು.