
ಅಫಜಲಪುರ: ಮಾ.16: ಬಯಲೆಂಬೊ ಬಯಲು ಕಾದಂಬರಿ ಈ ನೆಲದ ಜನರ ಶೋಷಣೆ, ಅಸ್ಪೃಶ್ಯತೆ, ಸಮೂದಾಯ ಪ್ರಜ್ಞೆ, ಜೀತ ಪದ್ಧತಿ, ಜಾತಿ ವ್ಯವಸ್ಥೆ ಹಾಗೂ ಜನರ ಬದುಕಿನ ನೈಜತೆ ವ್ಯಕ್ತವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂಗಣ್ಣ ಸಿಂಗೆ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಶ್ರೀ ಜ್ಞಾನಯೋಗಿ ಸಿದ್ದೇಶ್ವರಶ್ರೀ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನನ್ನ ನೆಚ್ಚಿನ ಪುಸ್ತಕ ಪೆÇ್ರೀ. ಎಚ್.ಟಿ ಪೆÇೀತೆ ಅವರ ಬಯಲೆಂಬೋ ಬಯಲು ಬಯೋಪಿಕ್ ಕಾದಂಬರಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕಾದಂಬರಿ ಹಳ್ಳಿ ಜನರ ನೈಜ ಬದುಕಿನ ಚಿತ್ರಣವಾಗಿದೆ. ಜೀತ ಪದ್ದತಿ, ಬಡತನ, ಜಾತಿ ಆಚರಣೆ, ಅಸಮಾನತೆ, ಅವಮಾನ, ಸೋಲು, ಸವಾಲು ಎಲ್ಲವುಗಳನ್ನು ಬಹಳ ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ. ಸರಳ ಹಾಗೂ ಜನಪದ ಶೈಲಿಯಲ್ಲಿನ ಬರಹ ಓದುಗರನ್ನು ಸೂಜಿಗಲ್ಲಿನಂತೆ ಹಿಡಿದಿಡುತ್ತದೆ ಅಲ್ಲದೆ ಕಾದಂಬರಿ ಓದಿ ಮುಗಿಸುವಷ್ಟರಲ್ಲೇ ಇದು ಕೇವಲ ಒಂದು ಮನೆಯ ಕಥೆಯಲ್ಲಿ ಒಂದೀಡಿ ಜನಸಮುದಾಯದ ಬದುಕಿನ ಕಥೆ ಎನ್ನುವ ಭಾವ ಓದುರಗಲ್ಲಿ ಮೂಡುತ್ತದೆ ಎಂದು ತಮ್ಮ ಉಪನ್ಯಾಸ ನುಡಿಯಲ್ಲಿ ಹೇಳಿದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಡಿ.ಎಂ ನದಾಫ್ ಉದ್ಘಾಟಿಸಿ ಮಾತನಾಡಿ ನಾಡಿನ ಶ್ರೀಮಂತ ಸಾಹಿತ್ಯ ಚರಿತ್ರೆಯಲ್ಲಿ ಉತ್ತರ ಕರ್ನಾಟಕದ ಕೊಡುಗೆ ಬಹಳ ದೊಡ್ಡದಾಗಿದೆ. ಆದರೆ ಬೆಂಗಳೂರು ಕೇಂದ್ರಿತ ಚಟುವಟಿಕೆಗಳಿಂದಾಗಿ ಸಂಕುಚಿತತೆಯಾಗುತ್ತಿದ್ದು ಇದರಿಂದ ಕ್ರೀಯಾಶೀಲತೆಗೆ ಪೆಟ್ಟು ಬೀಳುತ್ತಲಿದೆ. ಆದ್ದರಿಂದ ಬೆಂಗಳೂರು ಕೇಂದ್ರಿತ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದರೆ ನಮ್ಮ ಭಾಗದ ಕ್ರೀಯಾಶೀಲ ಬರಹಗಾರರು, ವಿಮರ್ಶಕರ ಪರಿಚಯ ರಾಜ್ಯಕ್ಕೆ ಆಗಲಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಚಾಲಕ ಬಿ.ಹೆಚ್.ನಿರಗುಡಿ ಮಾತನಾಡಿ 2 ವರ್ಷಗಳ ಅವಧಿಯಲ್ಲಿ ಪುಸ್ತಕ ಪ್ರಾಧಿಕಾರದ ವತಿಯಿಂದ 60ಕ್ಕೂ ಹೆಚ್ಚಿನ ಸಂಪುಟಗಳನ್ನು ಪ್ರಕಟಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಲ್ಯಾಣ ನಾಡಿನ ಹೆಸರಾಂತ ಹಿರಿಯ ವಿದ್ವಾಂಸರಾದ ಗೀತಾ ನಾಗಭೂಷಣ್, ಚನ್ನಣ್ಣ ವಾಲಿಕಾರ, ಶಾಂತರಸ ಅವರ ಸಂಪುಟ ರಚನೆಗೆ ಪ್ರಾಧಿಕಾರದ ಮುತುವರ್ಜಿ ವಹಿಸಲಿದ್ದು ಆದಷ್ಟು ಬೇಗ ಕಾರ್ಯ ಸಾಕಾರಗೊಳ್ಳಲಿದೆ ಎಂದರು.
ಶ್ರೀಸಾಯಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ ಚಿಂಚೋಳಿ, ಮದರಾ(ಕೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಶೋಭರಾಜ್ ಮ್ಯಾಳೇಶಿ ಮಾತನಾಡಿದರು. ಈ ಸಂದರ್ಭದಲ್ಲಿ ಚಂದ್ರಕಾಂತ ನಾವಿ, ಸಿದ್ದು ಉಡಚಣ, ಲಕ್ಷ್ಮೀಪುತ್ರ ಕಿರನಳ್ಳಿ, ಬಸವರಾಜ ಬಿಂಜಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯ ಬಿ.ಡಿ ಅಂಜುಟಗಿ ಸ್ವಾಗತಿಸಿದದರು. ಸುಶ್ಮೀತಾ ಅತ್ತೇ ನಿರೂಪಿಸಿದರು, ಭಾಗ್ಯಶ್ರೀ ಸರಸಂಬಿ ವಂದಿಸಿದರು.



























