ದೇಶದ ಅಭಿವೃದ್ಧಿಯಲ್ಲಿ ಇಂಜಿನೀಯರ್ ಕೊಡುಗೆ ಅಪಾರ: ಸಾಗರ ಖಂಡ್ರೆ

ಭಾಲ್ಕಿ :ಅ.19: ಇಂಜಿನೀಯರ್‍ಗಳು ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ,ತಂತ್ರಜ್ಞಾನ ಮತ್ತು ಆಧುನಿಕ ಸಂಶೋಧನೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಲಿದ್ದಾರೆ ಎಂದು ಬೀದರ ಸಂಸದ ಸಾಗರ ಖಂಡ್ರೆ ಪ್ರತಿಪಾದಿಸಿದರು.
ಪಟ್ಟಣದ ಟೌನಹಾಲ್‍ನಲ್ಲಿ ಸಿವಿಲ್ ಇಂಜಿನೀಯರ್ ಸಂಘದ ವತಿಯಿಂದ ಆಯೋಜಿಸಿದ ಇಂಜಿನೀಯರ್ಸ್ ದಿನಾಚರಣೆ ಮತ್ತು ಅಸೋಸಿಯೇಷನ್ ಆಫ್ ಕನಸಲ್ಟಿಂಗ್ ಸಿವಿಲ್ ಇಂಜಿನೀಯರ್ (ಎಸಿಸಿಇ) ಸಂಘ ಉದ್ಗಾಟಿಸಿ ಮಾತನಾಡಿದರು.
ಅಭಿಯಂತರರು ಶಕ್ತಿಯ ಅಗತ್ಯವನ್ನು ಪರಿಸರ ಸ್ನೇಹಿಯಾಗಿರಲು ಸೌರ,ಗಾಳಿ,ಜಲ ವಿದ್ಯುತ್ ಯೋಜನೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡು ಗ್ರಾಹಕರ ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಟ್ಟಡ ಕಾಮಗಾರಿಯಲ್ಲಿ ತೊಡಗಿದ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಬೇಕು.ಗುತ್ತಿಗೆದಾರರಾದವರೆಲ್ಲರೂ ರಾಜಕೀಯ ಪ್ರವೇಶ ಮಾಡಲು ಹವಣಿಸುತ್ತಿದ್ದಾರೆ ಎಂದು ಬಹು ಮಾರ್ಮಿಕವಾಗಿ ನುಡಿದರು.
ಬೀದರನ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಮಾತನಾಡಿ,ರಾಷ್ಟ್ರದ ಎಲ್ಲ ಕ್ಷೇತ್ರ ತೀವೃಗತಿಯಲ್ಲಿ ಬೆಳವಣಿಗೆಯಾಗುವಲ್ಲಿ ಅಭಿಯಂತರ್‍ರ ಸೇವೆ ಅವಿಸ್ಮರಣೀಯವಾಗಿದೆ.ಇಂಜಿನಿಯರ್‍ರ ಮೇಲ್ವಿಚಾರಣೆಯಲ್ಲಿ ಗುತ್ತಿಗೆದಾರರು ಎಮ್40 ಕಬ್ಬಿಣ ಬಳಸಿ ತಾಂತ್ರಿಕ ದೋಷಗಳಿಲ್ಲದಂತೆ ಕಾರ್ಯನಿರ್ವಹಿಸಬೇಕು.ಇತ್ತೀಚಿನ ದಿನಗಳಲ್ಲಿ ಅಭಿಯಂತರರು ಹೆಚ್ಚಿನ ಕಾರ್ಯಭಾರದ ಒತ್ತಡದಿಂದ ಮಾನಸಿಕ ಖಿನ್ನತೆಗೊಳಗಾಗುತ್ತಿದ್ದಾರೆ ಎಂದರು.
ಸಾನಿಧ್ಯವಹಿಸಿದ್ದ ಹಲಬರ್ಗಾದ ಹಾವಗಿಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ,ಗುತ್ತಿಗೆದಾರರು ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳ ಗುಣಮಟ್ಟದಲ್ಲಿ ವ್ಯತ್ಯಾಸ ಮಾಡಕೂಡದು ಎಂದು ಸಲಹೆ ನೀಡಿದರು.
ಹಿರೇಮಠದ ಮಹಾಲಿಂಗ ದೇವರು ನೇತೃತ್ವವಹಿಸಿ ಆಶೀರ್ವಚನ ನೀಡಿದರು.
ನಿವೃತ್ತ ಪ್ರಾಂಶುಪಾಲ ಅಶೋಕ ರಾಜೋಳೆ ಮಾತನಾಡಿ, ಸರ್ ಎಮ್.ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು, ವಿಶ್ವೇಶ್ವರಯ್ಯನವರು ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾಗಿ, ಕೆಆರ್‍ಎಸ್ ಡ್ಯಾಮ್ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಗಳ ಮೂಲಕ ಸಮಸ್ಯೆಮುಕ್ತ ಜೀವನ ಸಾಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನೀಯರಗಳ ರಾಜ್ಯ ಪರಿಷತ್ ಸದಸ್ಯರಾದ ಹಾವಶೆಟ್ಟಿ ಪಾಟೀಲ ಅವರು,ಸಿವಿಲ್ ಇಂಜಿನೀಯರರ ಸಮಸ್ಯೆ ಬಗೆಹರಿಸಲ ರಾಜ್ಯ ಪರಿಷತ್‍ನ ಕೋರ ಕಮಿಟಿಯಲ್ಲಿ ಚರ್ಚಿಸಲಾಗುವುದು ಎಂದರು.ಆದಿತ್ಯ ಬಿರ್ಲಾ,ಅಲ್ಟ್ರಾಟೇಕ್ ,ನೆರೊಲ್ಯಾಕ್,ಮೋಟಾರೋಲ್ ,ಯಲ್ಲಾಲಿಂಗ ಟ್ರೇಡಿಂಗ ಶ್ರೀ ಕಂಪನಿಯರು ಕಟ್ಟಡಕ್ಕೆ ಬಳಸುವ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಾರಂಜಾ ಇಇ ಜ್ಞಾನೇಶ್ವರ ಮಂಡೆ,ಲೋಕೋಪಯೋಗಿ ಇಲಾಖೆ ಎಇಇ ಅಲ್ತಾಫ್ ,ಕಾರಂಜಾ ಎಇಇ ಸೂರ್ಯಕಾಂತ ವಾಡೆಕರ್,ಮುಖಂಡರಾದ ಹಣಮಂತರಾವ ಚವ್ಹಾಣ, ಯುವ ಮುಖಂಡ ಚನ್ನಬಸವಣ್ಣ ಬಳತೆ, ಎಸಿಸಿಇ ಸಂಘದ ಅಧ್ಯಕ್ಷ ರಾಘವೇಂದ್ರ ಪ್ರಸಣ್ಣೆ,ಕೋಶಾಧ್ಯಕ್ಷ ಶಶಾಂಕ ಶಾಸ್ತ್ರಿ,ಕಾರ್ಯದರ್ಶಿ ಸತೀಶ ಕಾರಾಮುಂಗೆ,ಸಹಕಾರ್ಯದರ್ಶಿ ಗಿರೀಶ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಎಸಿಸಿಇ ಸಂಘದ ಗೌರವಾಧ್ಯಕ್ಷ ಅಶೋಕ ಭೋಸ್ಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದೀಪಕ ಥಮಕೆ ನಿರೂಪಿಸಿದರು.ಇಂಜಿನಿಯರ್ ನಾಗೇಶ ಲದ್ದೆ ವಂದಿಸಿದರು.

`ಇಂಜಿನೀಯರ್‍ರ ನೂತನ ಅವಿಷ್ಕಾರಗಳಿಂದ ಹಣ,ಸಮಯ,ಶ್ರಮದ ಉಳಿತಾಯವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ.ಇಂಜಿನೀಯರಗಳು ಗುಣಮಟ್ಟದ ಕಾಮಗಾರಿ ಕಾಪಾಡಿಕೊಳ್ಳಬೇಕು.ಭಾಲ್ಕಿ ಪಟ್ಟಣದ ಸೌಂದರ್ಯ ವೃದ್ಧಿಸುವಲ್ಲಿ ಅಭಿಯಂತರ್‍ರ ಕೊಡುಗೆ ಅಪಾರವಾಗಿದೆ.’
-ಸಾಗರ ಖಂಡ್ರೆ ಸಂಸದರು ಬೀದರ.