ಕಲಬುರಗಿ,ಮೆ.28- ಆರೋಗ್ಯ ರಕ್ಷಣೆಯ “ಮುಂಚೂಣಿಯ ಯೋಧರಿಗೆ” ಹೃದಯಸ್ಪರ್ಶಿ ಗೌರವ ಸಲ್ಲಿಸುವ ತುರ್ತು ವೈದ್ಯಕೀಯ ಚಿಕಿತ್ಸಾ ಸೇವಕರನ್ನು ಈ ದಿನ ಸನ್ಮಾನಿಸುವುದರಿಂದ ಅವರ ಸೇವಾ ಕ್ಷೇತ್ರಕ್ಕೆ ವಿಶೇಷ ಗೌರವ ನೀಡಿದಂತಾಗುತ್ತದೆ ಎಂದು ಉಸ್ತಾದ್ ಕಿಡ್ನಿ ಕೇರ್ ಮತ್ತು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ತನ್ವಿರ ಹುಸೇನ ಉಸ್ತಾದ ಅವರು ಹೇಳಿದರು.
ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದುರು ಇರುವ ಶಾಂತಿ ನಗರದ ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿನ್ನೆ ಮಂಗಳವಾರ ಮೇ 27 ರಂದು ಆಯೋಜಿಸಿದ್ದ ವಿಶ್ವ ತುರ್ತು ವೈದ್ಯಕೀಯ ಸೇವಾ ದಿನವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು, ಮಾತನಾಡಿದರು.
ತುತು9 ಮತ್ತು ಮಾರಣಾಂತಿಕ ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸಲು ದಿನದ 24/7 ಸಿದ್ಧರಾಗಿರುವ ತುರ್ತು ವೈದ್ಯಕೀಯ ವೃತ್ತಿಪರರು ನಡೆಸುವ ಸೇವೆಯನ್ನು ಸ್ಮರಿಸುವ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ತುರ್ತು ನಿರ್ವಹಣ ವಿಶೇಷ ತಜ್ಞವೈದ್ಯರಾದ ಡಾ.ಅಬ್ದುಲ ರಜಾಕ ಮಡಕಿ ಅವರು ಹೇಳಿದರು.
ಆಸ್ಪತ್ರೆಯ ತುರ್ತು ವಿಭಾಗದ ಸಿಬ್ಬಂದಿಗಳನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಿಬ್ಬಂದಿಗಳÀ ಅಸಾಧಾರಣ ಕೌಶಲ್ಯ, ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ರೋಗಿಗಳ ಯೋಗಕ್ಷೇಮಕ್ಕೆ ಅಚಲವಾದ ಬದ್ಧತೆಯನ್ನು ಅವರು, ಶ್ಲಾಘನಿಸಿದರು.”ತುರ್ತು ಪರಿಸ್ಥಿತಿಯಲ್ಲಿ ಪ್ರತಿ ಸೆಕೆಂಡ್ ಎಣಿಕೆಯಾಗುತ್ತದೆ” ಎಂದರು.
ಆಸ್ಪತ್ರೆಯ ನಮ್ಮ ತುರ್ತು ತಂಡವು ಅಪಾರ ಒತ್ತಡದಲ್ಲಿ ಧೈರ್ಯ ಮತ್ತು ಸಾಮಥ್ರ್ಯವನ್ನು ನಿರಂತರವಾಗಿ ಪ್ರದರ್ಶಿಸುತ್ತದೆ. ಇಂದು, ನಮ್ಮ ರೋಗಿಗಳು ಮತ್ತು ಸಮುದಾಯದ ಜೀವನದಲ್ಲಿ ಸ್ಪಷ್ಟವಾದ ವ್ಯತ್ಯಾಸವನ್ನುಂಟುಮಾಡುವ ಅವರ ದಣಿವರಿಯದ ಪ್ರಯತ್ನಗಳನ್ನು ನಾವು ಗೌರವಿಸುತ್ತೇವೆ ಎಂದು ಆಸ್ಪತ್ರೆಯ ನಿದೇರ್ಶಕರಾದ ಡಾ.ಸುಬಿಯಾ ತನ್ವಿರ ಹುಸೇನ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಅನ್ನು ಚವ್ಹಾಣ, ಡಾ.ಅಬ್ದುಲ ರಜಾಕ ಮಡಕಿ, ಡಾ.ಮುಸಾಬ್ ಶೇಖ, ಡಾ.ಶಾಕೀರ, ಸೈಯಿದಾ ಸನಾ, ಫರಹೀನ್ ಬೇಗಂ, ಹೀನಾ, ಆಯೇಷಾ, ಸಾಬೇರ, ಸಲಾಂ ಬಾಜೆ, ಸೈದಾ ಅರ್ಪಾ, ಸೈಯಿದಾ ಶೇಖ ಅಕ್ಸಾ, ಹೀನಾ ಕೌಸರ, ರವಿನಾ, ಅಂಕಿತಾ, ಸವಿತಾ, ಸಚೀನ, ರಾಕೀಬ್ ಅಹ್ಮದ, ಹುಮೇರಾ, ತಸ್ಲೀಮಾ, ವಿಜಯಲಕ್ಷ್ಮೀ, ಉದಯ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.