
ಕಲಬುರಗಿ,ಮಾ.25-ಜಿಲ್ಲೆಯ ಆಳಂದ ತಾಲೂಕಿನ ಎಲೆನಾವದಗಿ ಗ್ರಾಮದಲ್ಲಿ ಸುಕ್ಷೇತ್ರ ನಾಗಲಿಂಗೇಶ್ವರರ ವಾಸ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ 14 ದಿವಸಗಳ ಅಂದರೆ ಮಾ.23 ರಿಂದ ಏ.5ರವರೆಗೆ ನಡೆಯುವ ದಾನಮ್ಮ ದೇವಿಯ ಪುರಾಣ ಪ್ರವಚನವನ್ನು ಎಲೆನಾವದಗಿ ಸಂಸ್ಥಾನ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು.
ಪುರಾಣ ಪ್ರವಚನಕಾರರಾದ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ಸುಂಟನೂರ್, ಸಂಗೀತ ಸೇವೆಯನ್ನು- ಶರಣು ಸಾಗನೂರ್, ಶಿವಾನಂದ ಸ್ವಾಮಿ , ತಬಲಾ-ಶ್ರೀಶೈಲ್ ನೆರವೇರಿಸಿ ಕೊಟ್ಟರು.
ಗ್ರಾಮದ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.




























