Home ಕ್ರೈಂ ಸುದ್ದಿಗಳು ಗೋನಲ್ ಗ್ರಾಮದಲ್ಲಿ ವೃದ್ಧನ ಹತ್ಯೆ

ಗೋನಲ್ ಗ್ರಾಮದಲ್ಲಿ ವೃದ್ಧನ ಹತ್ಯೆ

ಯಾದಗಿರಿ: ಮಾ.13:ಜಿಲ್ಲೆಯ ವಡಗೇರಾ ತಾಲೂಕಿನ ಗೋನಲ್ ಗ್ರಾಮದಲ್ಲಿ ವೃದ್ಧನೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೃತ ವ್ಯಕ್ತಿಯನ್ನು ಹಂಪಣ್ಣ ಸಜ್ಜನ್ (76), ಎಂದು ಗುರುತಿಸಲಾಗಿದೆ. ಅವರು ತಮ್ಮ ಹೊಲದಲ್ಲಿಯೇ ವಾಸವಿದ್ದು ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಕುಟುಂಬದವರು ಸುಮಾರು 18 ವರ್ಷಗಳ ಹಿಂದೆ ಆಸ್ತಿ ಹಂಚಿಕೆ ಮಾಡಿಕೊಂಡಿದ್ದು, ಹಂಪಣ್ಣ ಅವರ ಹೆಸರಲ್ಲಿ ಸುಮಾರು 12 ಎಕರೆ ಜಮೀನು ಉಳಿದಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ಮೃತರ ಪುತ್ರ ನರಸರೆಡ್ಡಿ (48) ಅವರು ವಡಗೇರಾ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಸಾರಾಂಶದ ಪ್ರಕಾರ, ದಿನಾಂಕ 12-03-2026 ರಂದು ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ತಂದೆಯವರು ಊರಿಗೆ ಬಾರದಿರುವುದನ್ನು ಗಮನಿಸಿ ಹೊಲಕ್ಕೆ ಹೋಗಿ ನೋಡಿದಾಗ, ಹಂಪಣ್ಣ ಅವರ ದೇಹದ ಮೇಲೆ ಭಾರಿ ರಕ್ತಗಾಯಗಳಿದ್ದು ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ವಡಗೇರಾ ಪೆÇಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 57/2026 ದಾಖಲಿಸಲಾಗಿದ್ದು, ಬಿ.ಎನ್.ಎಸ್. ಕಾಯ್ದೆಯ ಕಲಂ 281 ಹಾಗೂ 106 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಪೆÇಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಆರೋಪಿತರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಮೃತ ಹಂಪಣ್ಣ ಅವರಿಗೆ 3 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳು ಇದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದು ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹತ್ಯೆಯ ಹಿಂದಿನ ಕಾರಣ ಹಾಗೂ ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಗ್ರಾಮದಲ್ಲಿ ಈ ಘಟನೆ ಸಂಚಲನ ಮೂಡಿಸಿದೆ.