ಜುಲೈ ಅಂತ್ಯಕ್ಕೆ ಈಜಿಪುರ ಫ್ಲೈಓವರ್ ಪೂರ್ಣ

ಬೆಂಗಳೂರು, ಫೆ. ೨೦- ಈಜಿಪುರ ಪ್ಲೈಓವರ್ ಜುಲೈ ಅಂತ್ಯದೊಳಗೆ ಪೂರ್ಣ. ಈಜೀಪುರ ಮೇಲ್ಸೇತುವೆಯ ಸಂಪೂರ್ಣ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ಜಿಬಿಎ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದರು. ಹೆಚ್ಚಿನ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಎಲ್ಲಾ ಕಾರ್ಯಚಟುವಟಿಕೆಗಳನ್ನು ಏಕಕಾಲದಲ್ಲಿ ನಡೆಸಿ ವೇಗಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.


ಸೆಂಟ್ ಜಾನ್ಸ್ ಬಳಿ ಪಿಲ್ಲರ್ ಅಳವಡಿಕೆಗೆ ಇದ್ದ ತೊಡಕು ನಿವಾರಣೆಯಾಗಿದ್ದು ಮೂರು ವಾರಗಳು ಕಳೆದಿದ್ದರೂ ಪೈಲಿಂಗ್ ಕೆಲಸ ವಿಳಂಬವಾಗಿ ಆರಂಭಿಸಿರುವುದನ್ನು ಗಮನಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.


ಪೈಲಿಂಗ್ ಕೆಲಸವನ್ನು ೧೫ ದಿನಗಳೊಳಗೆ ಪೂರ್ಣಗೊಳಿಸಲು ಸೂಚಸಿ. ಸೆಗ್ಮೆಂಟ್ ಕಾಸ್ಟಿಂಗ್ ಕಾರ್ಯವನ್ನು ವೇಗಗೊಳಿಸುವುದು ೨೪ ಗಂಟೆಗಳ ಕಾಲ ಕಾಮಗಾರಿ ನಡೆಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಆದೇಶ ನೀಡಿದರು.ಇನ್ನೂ ರ್ಯಾಂಪ್ ಕಾಮಗಾರಿ ತ್ವರಿತಗೊಳಿಸಿ ಮಡಿವಾಳ ಕಡೆ ಡೌನ್ ರ್ಯಾಂಪ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ.


ಸಂಚಾರಿ ಪೊಲೀಸ್ ಇಲಾಖೆಯಿಂದ ಭಾಗಶಃ ರಸ್ತೆ ನಿರ್ಬಂಧಕ್ಕೆ ಅನುಮತಿ ಪಡೆಯುವುದು.
ಮಳೆನೀರು ಹರಿವುಗಾಗಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವುದು.


ಕೇಂದ್ರೀಯ ಸದನ್ ಹಾಗೂ ಆಸ್ಟ್ರೋ ಫಿಜಿಕ್ಸ್ ಜಾಗವನ್ನು ವಶಪಡಿಸಿಕೊಂಡು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕ್ರಮ ವಹಿಸಬೇಕು.ಸರ್ಜಪುರ ರಸ್ತೆಯ
೧.೦೬ ಕಿ.ಮೀ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು
ಒಂದು ಭಾಗ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


ಉಳಿದ ೫೦% ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.ರಾತ್ರಿ ವೇಳೆ ಗಸ್ತು ಸ್ಥಳೀಯ ಪೊಲೀಸರ ಜೊತೆ ಕೈಜೊಡಿಸಿ ಕಸ ಎಸೆಯುವತ ವಿರುದ್ಧ ದಂಡ ವಿಧಿಸಿ ಎಂದು ಸೂಚಿಸಿ. ಸುಲ್ತನ್ ಪೇಟೆ ರಸ್ತೆಯಲ್ಲಿ ೧.೧೫ ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿ ಮಾರ್ಚ್ ೧೫ರಿಂದ ಕಾಮಗಾರಿ ಆರಂಭಕ್ಕೂ ಮುನ್ನ ಜಲಮಂಡಳಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು..

ಇನ್ನೂ ಪರಿಶೀಲನೆ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್., ಮುಖ್ಯ ಅಭಿಯಂತರರಾದ ರವಿ, ಡಾ. ರಾಘವೇಂದ್ರ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.