ಬದನೆಕಾಯಿ ಗೊಜ್ಜು

ಬೇಕಾಗುವ ಸಾಮಾಗ್ರಿಗಳು :

ಬದನೆಕಾಯಿ ೪, ಟೊಮೆಟೊ ೧

ಹಸಿರು ಮೆಣಸಿನಕಾಯಿ ೨, ಒಣ ಮೆಣಸಿನಕಾಯಿ

ಬೆಳ್ಳುಳ್ಳಿ ೪ ರಿಂದ ೫ ಎಸೆಳು, ಜೀರಿಗೆ ೧ ಚಮಚ

ಸಲ್ಪ ಕೊತ್ತಂಬರಿ ಸೊಪ್ಪು, ಹುಣಸೆಹಣ್ಣಿನ ರಸ ಳಿ ಕಪ್

ಬೆಲ್ಲ ಳಿ ಚಮಚ, ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ ? ಎಣ್ಣೆ ೧ ಚಮಚ

ಸಾಸವೆ ೪ ಚಮಚ, ಜೀರಿಗೆ ೪ ಚಮಚ

ಅರಿಷಿಣ ೪ ಚಮಚ, ಕರಿಬೇವು ೫ ರಿಂದ ೬

ಹೆಚ್ಚಿದ ಈರುಳ್ಳಿ ೧

ಮಾಡುವ ವಿಧಾನ :

ಕೊಕ್ಕರ್ ನಲ್ಲಿ ಹೆಚ್ಚಿದ ಬದನೆಕಾಯಿ, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಳಿ ಕಪ್ಪ ನೀರನ್ನು ಸೇರಿಸಿ ೧ ವಿಷಲ್ ಕೂಗಿಸಿ.

ಒಂದು ಪಾತ್ರೆಗೆ ಎಣ್ಣೆಹಾಕಿ ಅದು ಕಾದ ನಂತರ ಸಾಸವೆ, ಜೀರಿಗೆ, ಅರಿಷಿಣ, ಒಣ ಮಣಸಿನಕಾಯಿ ಮತ್ತು ಕರಿಬೇವು ಹಾಕಿ ಬಾಡಿಸಿ.

ನಂತರ ಈರುಳ್ಳಿ ಯನ್ನು ಸೇರಿಸಿ ಚನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಹುಣಸೆಹಣ್ಣಿನ ರಸ ಮತ್ತು ಬೆಲ್ಲ ಸೇರಿಸಿ ಕೈಯಾಡಿಸಿ. ನಂತರ ಕೂಕ್ಕರ್ ನಲ್ಲಿ ಬೇಯಿಸಿದ ತರಕಾರಿ ನೀರನ್ನು ಒಗ್ಗರಣೆಗೆ ಸೇರಿಸಿ, ಬೇಯಿಸಿದ ತರಕಾರಿಯನ್ನು ಚೆನ್ನಾಗಿ ಹಿಸುಕಿ ಒಗ್ಗರಣೆಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ೨ ನಿಮಿಷ ಕುದಿಯಲು ಬಿಡಿ. ನಂತರ ಕೊತ್ತಂಬರಿ ಸೊಪ್ಪು ಹಾಯಿ ಕೈಯಾಡಿಸಿದರೆ ಬಿಸಿಗೊಜ್ಜು ಊಟಕ್ಕೆ ರೆಡಿಯಾಗುತ್ತದೆ