ಲಿಂಗಸುಗೂರು: ಆಧುನಿಕ ಯುಗದ ಈ ಸಮಾಜದಲ್ಲಿ ಇನ್ನೂ ಮನುಷ್ಯ ಅಜ್ಞಾನ, ಅಂದ:ಕಾರ, ಮೂಢನಂಬಿಕೆಗಳಿAದ ಮುಕ್ತನಾಗಿಲ್ಲ. ಅಸಮಾನತೆ, ಅಸ್ಪೃಶ್ಯತೆ ಜೀವಂತವಾಗಿವೆ. ಬೌದ್ಧಿಕ ದಾರಿದ್ರ‍್ಯ ಸಮಾಜವನ್ನು ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಒಂದೇ ಪ್ರಮುಖ ಅಸ್ತ್ರವಾಗಿದೆ ಗುಲ್ಬರ್ಗ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ, ಬಂಡಾಯ ಸಾಹಿತಿ ಡಾ.ಖಾಜಾವಲಿ ಈಚನಾಳ ಹೇಳಿದರು.
ಅವರು ಸ್ಥಳೀಯ ಉಮಾಮಹೇಶ್ವರಿ ಸಮೂಹ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಶಿಕ್ಷಣವನ್ನು ಪಡೆದೂ ಕೂಡಾ ನಾವಿಂದು ಮಾನವೀಯತೆಯನ್ನು ಮರೆಯುತ್ತಿದ್ದೇವೆ. ಬುದ್ದಿ ಭ್ರಹ್ಮಾಂಡವಾಗಿದ್ದು ಹೃದಯ ಬುಡಿಮೆಯಾಗಿದೆ ಎಂದರು.
ನAತರ ಕಾಲೇಜಿನ ಪ್ರಾಚಾರ್ಯ ವೀರೇಶ್ ಆದೋನಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಸಾಧಕರ ಜೀವನದ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಈ ಕ್ಷಣ ಸಮಸ್ಯೆಯ ಆಡಳಿತ ಅಧಿಕಾರಿ ಅಂಬರೀಶ್ ಸ್ವಾಮಿ ತೋರಣದಿನ್ನಿ ಸಂಯೋಜಕ ಮಸ್ತಾನ್ ಸಾಬ್ ಗುಂತುಗೋಳ ಸ್ವರ್ಣಲತಾ, ಉಪನ್ಯಾಸಕರಾದ ಜಿ ಮಂಜುನಾಥ್, ಯಮನಪ್ಪ, ಚನ್ನಬಸವ ಸ್ವಾಮಿ, ಗಂಗಾಧರ, ಬಸವರಾಜ್, ನಿರ್ಮಲ, ಸಾವಿತ್ರಿ, ಶಾಂತ ಮತ್ತು ಇನ್ನಿತರು ಇದ್ದರು