ಶಿಕ್ಷಣವೇ ಮಕ್ಕಳಿಗೆ ಭದ್ರ ಬುನಾದಿ

ಕಾಳಗಿ :ಜ.೩೧:ಮಕ್ಕಳು ಸ್ವಾವಲಂಬನೆಯಾಗುವAತೆ ಶಿಕ್ಷಕರು ಮನಮುಟ್ಟುವಂತೆ ಬೋಧನೆ ಮಾಡಬೇಕು. ಇದರಿಂದ ಅವರ ಮುಂದಿನ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ. ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷ ಣವೇ ಮಕ್ಕಳಿಗೆ ಭದ್ರಬುನಾದಿ ಎಂದು ರಾಚೋಟೇಶ್ವರ ಸಂಸ್ಥಾನ ಮಠ, ಹೊನ್ನಕಿರಣಗಿ ಅವರ ಪೂಜ್ಯರಾದ ಶ್ರೀ ಷ.ಬ್ರ. ಜಗದ್ಗುರು ಶ್ರೀ ಚಂದ್ರಗುAಡ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಪಟ್ಟಣದ ಶಿವಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್ ಶಾಲೆಯ ವಾರ್ಷಿಕೋತ್ಸವ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತಿಗೆ ಅನುಗುಣವಾಗಿ ಪ್ರೊ?ತ್ಸಾಹಿಸಬೇಕು. ಕಲಿಕಾ ಸಾಮಗ್ರಿ ಪೂರೆ?ಸಬೇಕು. ಸಮಾಜದಲ್ಲಿಯೂ ಎಲ್ಲರೂ ಒಂದೇ ಆಗಿದ್ದರೂ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯ ನಿಂಬೆಣಪ್ಪ ಸಾಹು ಕೊರವಾರ ಮಂಗಲಗಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಳಗಿ ಸಂಸ್ಥಾನ ಹಿರೆಮಠದ ಶ್ರೀ ನೀಲಕಂಠ ಮರಿದೇವರು, ಚಿಂತಕೋಟಿ ಶ್ರೀಗಳು, ಕೃಷಿ ಸಮಾಜದ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ, ಪಟ್ಟಣ ಪಂಚಾಯತ ಸದಸ್ಯರಾದ ಗುರುರಾಜ ಮದ್ದೂರ, ಬಸವರಾಜ ಮಡಿವಾಳ, ರಮೇಶ ಕಿಟ್ಟದ, ಶರಣಪ್ಪ ಬೇಲೂರ, ಎಸ್,ಬಿ,ಡಿ,ವಿ,ಟಿ ಪ್ರಧಾನರು ಸತ್ಯನಾರಾಯಣ ವನಮಾಲಿ, ಎಸ್,ಬಿ,ಡಿ,ವಿ,ಟಿ ಸಂಸ್ಥಾಪನಾ ಸದಸ್ಯ ಶಿವಶರಣಪ್ಪ ಕಮಲಾಪೂರ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಭೀಮರಾಯ ಮಲಘಾಣ ಸೇರಿದಂತೆ ಶಿಕ್ಷಕ ವೃಂದದವರು, ಟ್ರಸ್ಟ್ನ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪಾಲಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.