ಪ್ರತಿ ಕ್ಷಣ ಬಳಸಿಕೊಂಡು ವಿದ್ಯಾರ್ಜನೆ ಮಾಡಿ: ಕುಂಬಾರ

ವಿಜಯಪುರ, ಮೇ.25:ಪ್ರತಿ ಕ್ಷಣವನ್ನು ಬಳಸಿಕೊಂಡು ವಿದ್ಯಾರ್ಜನೆ ಮಾಡಬೇಕು. ಪ್ರತಿ ಕ್ಷಣವನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಉಪನ್ಯಾಸಕÀ ಬಸವರಾಜ ಕುಂಬಾರ ಅವರು ಹೇಳಿದರು.
ನಗರದ ಹೊರ ವಲಯದಲ್ಲಿರುವ ಎಕ್ಸಲಂಟ್‍ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳನ್ನು ಶುಭ ಹಾರೈಸಿ, ಶಾಲೆ ಕೇವಲ ಕಲ್ಲು, ಇಟ್ಟಿಗೆಗಳಿಂದ ನಿರ್ಮಾಣ ಮಾಡುವದಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕೇಂದ್ರವಾಗಬೇಕು. ಗೌತಮಬುದ್ಧನ ಶಾಂತಿ, ಸಂಯಮ, ಅಂಬೇಡ್ಕರ್‍ರವರಂತಹ ತಾತ್ವಿಕ ಶಕ್ತಿ ರೂಪಗೊಂಡಿದ್ದು ಅವರು ಪಡೆದ ಶಿಕ್ಷಣದಿಂದಲೇ ಸಾಧ್ಯ. ಆದ್ದರಿಂದ ಮಕ್ಕಳು ಸಾಧನೆ ಮಾಡಿ ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡÀಬೇಕು. ಅಂದಾಗ ಮಾತ್ರ ಶಿಕ್ಷಣ ಪಡೆದದ್ದು ಸಾರ್ಥಕವೆಂದು ಹೇಳಿದರು.
ಇದೇ ಸಮಾರಂಭದಲಿ ಎರಡು ತಿಂಗಳ ಬೇಸಿಗೆ ತರಗತಿಗಳಲ್ಲಿ ಅತ್ಯುತ್ತಮ ಅಂಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳಲ್ಲಿ ಬೇಸಿಗೆ ತರಗತಿಗಳು ನಮ್ಮ ಅಭ್ಯಾಸದ ದಿಕ್ಕನ್ನು ಬದಲಿಸಿತು ಮತ್ತು ವಿಷಯದ ಬಗ್ಗೆ ಹೆಚ್ಚು ಜ್ಞಾನ ಹೊಂದಲು ಸಹಾಯಕಾರಿಯಾಯಿತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲಂಟ್ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಕೆಲೂರ ಮಾತನಾಡಿ, ಜಗತ್ತಿನಲ್ಲಿ ಎಲ್ಲವನ್ನೂ ಗಳಿಸಬಹುದು. ಆದರೆ ಸಮಯವನ್ನು ಗಳಿಸಲು ಸಾಧ್ಯವಿಲ್ಲ. ಒಂದು ಸಲ ಕಳೆದು ಹೋದ ಕ್ಷಣ ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಗುರುಗಳಾದ ಶ್ರೀಶೈಲ ಹೆಗಳಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಾದ ಈಶ್ವರ ಹಿಟ್ಟಿನಳ್ಳಿ, ಈರಪ್ಪ ಗಾಣಿಗೇರ, ಶರಣಗೌಡ ಹುನಕುಂಟೆ, ಸುಧಾಕರ ಅಲ್ಲವಗೋಳ, ಶ್ರೀಕಾಂತ ಹೂಗಾರ ಉಪಸ್ಥಿತರಿದ್ದರು. ನಿವೇದಿತಾ ಮತ್ತು ಆನಂದ ಹೊನವಾಡ ಪ್ರಾರ್ಥಿಸಿದರೆ, ರಾಧಾ ಘಾಟಗೆ ವಂದಿಸಿದರು.