
ಮೊಟ್ಟೆಯನ್ನು ತಿನ್ನುವುದರಿಂದ ಕಣ್ಣಿನ ರೆಟಿನಾದ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಕಣ್ಣಿಗೆ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ದೇಹಕ್ಕೆ ವಿವಿಧ ರೀತಿಯ ವಿಟಮಿನ್-ಪ್ರೋಟೀನ್?ಗಳ ಅವಶ್ಯಕತೆ ಇರುತ್ತದೆ. ಅಂತಹ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು.
ಮೊಟ್ಟೆಯಲ್ಲಿ ಹಲವಾರು ಪೋಷಕಾಂಶಗಳು ಅಡಗಿದ್ದು, ಇದು ಆರೋಗ್ಯದ ಹಿತದೃಷ್ಟಿಯಿಂದ ಡಯಟ್?ನಲ್ಲಿ ಮೊಟ್ಟೆಯನ್ನು ಸೇರಿಸುವುದು ಉತ್ತಮ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ದಿನವೂ ಕೇವಲ ಒಂದು ಮೊಟ್ಟೆ ತಿಂದರೂ ಕೂಡ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಮೂಳೆಗಳು ಬಲಗೊಳ್ಳುವುದಲ್ಲದೆ,
ಕೀಲುನೋವಿನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಮೊಟ್ಟೆಯನ್ನು ತಿನ್ನುವುದರಿಂದ ಬುದ್ಧಿಶಕ್ತಿಯು ಚುರುಕಾಗುತ್ತದೆ.
ದೇಹ ತೂಕ ಹೆಚ್ಚಾಗದಂತೆ ಉತ್ತಮ ಆರೋಗ್ಯವನ್ನು ಪಡೆಯಲು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುವುದು ಉತ್ತಮ.
ಮೊಟ್ಟೆಯಲ್ಲಿರುವಹಳದಿಭಾಗವನ್ನು ಹೆಚ್ಚಾಗಿ ತಿನ್ನುವುದರಿಂದ ದೇಹ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ದಿನಂಪ್ರತಿ ಮೊಟ್ಟೆತಿನ್ನುವುದರಿಂದ ಕೂದಲು ಮತ್ತು ತ್ವಚೆಯು ಕಾಂತಿಯುತವಾಗುತ್ತದೆ. ಅಲ್ಲದೆ ಇದರಿಂದಏಜಿಂಗ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಮೊಟ್ಟೆಯನ್ನುಬೇಯಿಸಿ ತಿನ್ನುವುದು ಉತ್ತಮ. ಆಮ್ಮೆಟ್ ಅಥವಾ ಇತರ ಖಾದ್ಯಗಳ ರೂಪದಲ್ಲಿ ಮೊಟ್ಟೆಯನ್ನು ಸೇವಿಸುವುದರಿಂದ ಪೌಷ್ಠಿಕಾಂಶ ಕಡಿಮೆಯಾಗುವ ಸಾಧ್ಯಯಿರುತ್ತದೆ.