
ಕೆಂಭಾವಿ:ಜ.30:ಆರೋಗ್ಯವೇ ಭಾಗ್ಯ ಎಂಬ ವಾಣಿಯಂತೆ
ಮನುಷ್ಯನ ದೇಹಕ್ಕೆ ಪೌಷ್ಠಿಕ ಆಹಾರ ಬಹಳ ಮುಖ್ಯ. ಹೆಚ್ಚಿನ ಪೌಷ್ಠಿಕಾಂಶಗಳೆ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ಹೇಳಿದರು.
ಪಟ್ಟಣದ ವಿದ್ಯಾಲಕ್ಷಿ??ೀ ಪಬ್ಲಿಕ್ ಸ್ಕೂಲ್‍ನಲ್ಲಿ 77 ನೆ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸವಿರುಚಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. . ಸಮತೋಲನ ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವದರ ಜೊತೆಗೆ ಮನಸ್ಸು ಸಹ ಉತ್ತಮವಾಗಿರುತ್ತದೆ. ಕರಿದಿರುವ ಆಹಾರವನ್ನು ಸೇವಿಸಬಾರದು. ಇದರಿಂದ ದೇಹಕ್ಕೆ ಹೆಚ್ಚು ಅಪಾಯಕಾರಿ. ಆಹಾರದ ಮಹತ್ವವನ್ನು ತಿಳಿಸಿಕೊಡಲು ಈ ಶಾಲೆಯಿಂದ ಆಹಾರ ಸಂಭ್ರಮ ಹಮ್ಮಿಕೊಂಡಿರುವದು ಉತ್ತಮ ಕಾರ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಷ.ಬ್ರ.ಚನ್ನಬಸವ ಶಿವಾಚಾರ್ಯರು, ಮುಖಂಡರಾದ ರಾಮನಗೌಡ ಪಾಟೀಲ, ದೇವಿಂದ್ರಪ್ಪ ಭೋವಿ, ಸಿಆರ್‍ಪಿ ಬಂದೇನವಾಜ ನಾಲತವಾಡ, ಶ್ರೀಶೈಲ ಪಾಸೋಡಿ, ಸಂಸ್ಥೆಯ ಅಧ್ಯಕ್ಷ ಎಸ್.ರಾಮು, ಬಸನಗೌಡ ಬೆಕಿನಾಳ, ಮುಖ್ಯಗುರು ನಾಗವೇಣಿ, ಬಿ.ಎಸ್.ಪಟೇಲ ಸೇರಿದಂತೆ ಖಾಸಗಿ ಶಾಲಾ ಮುಖ್ಯಸ್ಥರು, ಶಾಲೆಯ ಶಿಕ್ಷಕ ಸಿಬ್ಬಂದಿ, ಪಾಲಕರು ಹಾಜರಿದ್ದರು.
























